ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ರಾಪಟ’ ತುಳು ಸಿನಿಮಾ ಇಂದು ತೆರೆಗೆ

Published 1 ಡಿಸೆಂಬರ್ 2023, 5:20 IST
Last Updated 1 ಡಿಸೆಂಬರ್ 2023, 5:20 IST
ಅಕ್ಷರ ಗಾತ್ರ

ಮಂಗಳೂರು: ‘ವಿಭಿನ್ನ ಕಥಾಹಂದರ ಹೊಂದಿರುವ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ‘ರಾಪಟ’ ತುಳು ಸಿನಿಮಾ ಕರಾವಳಿಯಾದ್ಯಂತ ಡಿ.1ರಂದು ತೆರೆ ಕಾಣುತ್ತಿದೆ’ ಎಂದು ನಟ, ನಿರ್ದೇಶಕ ಅರ್ಜುನ್‌ ಕಾಪಿಕಾಡ್‌ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೊಳ್ಳಿ ಮೂವೀಸ್‌, ಅವಿಕಾ ಪ್ರೊಡಕ್ಷನ್ಸ್‌ ನಿರ್ಮಿಸಿರುವ ಚಿತ್ರಕ್ಕೆ ನಟ, ನಿರ್ದೇಶಕ ದೇವದಾಸ್‌ ಕಾಪಿಕಾಡ್‌ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದಿದ್ದಾರೆ. ಸಹ ನಿರ್ದೇಶಕರಾಗಿ ಶನಿಲ್‌ ಗುರು, ಸಿನಿಮಾಟೋಗ್ರಾಫರ್‌ ಆಗಿ ಸಚಿನ್‌ ಎಸ್‌.ಶೆಟ್ಟಿ, ನಿರ್ಮಾಪಕರಾಗಿ ಸಂದೀಪ್ ಶೆಟ್ಟಿ, ಸಂಕಲನಕಾರನಾಗಿ ಯಶ್ವಿನ್‌ ಕೆ.ಶೆಟ್ಟಿಗಾರ್ ಕಾರ್ಯ ನಿರ್ವಹಿಸಿದ್ದಾರೆ. ತಾಂತ್ರಿಕ ವಿಭಾಗದಲ್ಲಿ ಅನುಭವಿ ತಂಡ ಕೆಲಸ ಮಾಡಿದೆ. ನಾಯಕ ನಟನಾಗಿ ಅನೂಪ್‌ ಸಾಗರ್‌, ನಾಯಕಿ ನಟಿಯಾಗಿ ನಿರೀಕ್ಷಾ ಶೆಟ್ಟಿ ಮತ್ತು ತುಳುವಿನ ಪ್ರಸಿದ್ಧ ಕಲಾವಿದರು ಅಭಿನಯಿಸಿದ್ದಾರೆ’ ಎಂದು ಅವರು ತಿಳಿಸಿದರು.

‘ತುಳುವಿನಲ್ಲಿ ಇದುವರೆಗೆ ಮೂಡಿಬಂದಿರುವ ಚಿತ್ರಗಳಿಗಿಂತ ರಾಪಟ ವಿಭಿನ್ನವಾಗಿದೆ ಎಂದು ಪ್ರೇಕ್ಷಕರಿಗೆ ವೀಕ್ಷಿಸಿದ ನಂತರ ತಿಳಿಯುತ್ತದೆ. ತುಳುಚಿತ್ರರಂಗದಲ್ಲಿ ಬದಲಾವಣೆ ತರಬೇಕು ಎಂದು ಕೇಳಿಬರುತ್ತಿರುವ ಕೂಗಿಗೆ ಉತ್ತರವಾಗಿ ಸಿನಿಮಾ ತಯಾರಿಸಿದ್ದೇವೆ. ಯುಎಇ, ಬಹ್ರೇನ್‌, ಮಸ್ಕತ್‌, ಕತಾರ್ ಮತ್ತು ಮಣಿಪಾಲದಲ್ಲಿ ಪ್ರೀಮಿಯರ್‌ ಶೋ ಏರ್ಪಡಿಸಲಾಗಿತ್ತು, ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು’ ಎಂದು ಅವರು ಹೇಳಿದರು.

ನಟ, ನಿರ್ದೇಶಕ ದೇವದಾಸ್‌ ಕಾಪಿಕಾಡ್‌ ಮಾತನಾಡಿ, ತುಳುಚಿತ್ರರಂಗದಲ್ಲಿ ಬದಲಾವಣೆ ಗಾಳಿ ಬೀಸಬೇಕು ಎನ್ನುವ ಅಂಶವನ್ನು ಇಟ್ಟುಕೊಂಡು ವಿಭಿನ್ನವಾಗಿ ಚಿತ್ರ ತಯಾರಿಸಿದ್ದು, ಬದಲಾವಣೆಗೆ ನಾಂದಿಯಾಗಲಿದೆ. ನೈಜ ಘಟನೆಯ ಎಳೆಯೊಂದನ್ನು ಇರಿಸಿಕೊಂಡು, ಹಾಸ್ಯ, ಹಾರರ್‌, ಸಾಹಸ, ಸಸ್ಪೆನ್ಸ್‌ ಲೇಪನ ನೀಡಲಾಗಿದೆ ಎಂದರು.

ವಿತರಕ ಸಚಿನ್‌ ಮಾತನಾಡಿ, ಚಿತ್ರ ಬಿಡುಗಡೆಯಾದ 2–3 ವಾರಗಳ ನಂತರ ಬೆಂಗಳೂರು, ಕಾಸರಗೋಡು ಮತ್ತು ವಿವಿಧ ದೇಶಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ನಾಯಕ ನಟ ಅನೂಪ್‌ ಸಾಗರ್, ನಟಿ ನಿರೀಕ್ಷಾ ಶೆಟ್ಟಿ, ಸಿನಿಮಾಟೋಗ್ರಾಫರ್‌ ಸಚಿನ್‌ ಎಸ್‌.ಶೆಟ್ಟಿ, 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT