‘ಬಸ್ ಟರ್ಮಿನಲ್ ಅನಿವಾರ್ಯ ’
ನಗರದಲ್ಲಿ ವಾಹನ ದಟ್ಟಣೆ ತಪ್ಪಿಸಲು ಖಾಸಗಿ ಸಿಟಿ ಬಸ್ ಸರ್ವಿಸ್ ಬಸ್ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಪಂಪ್‌ವೆಲ್‌ನಲ್ಲಿ ಸುಸಜ್ಜಿತ ಬಸ್ ಟರ್ಮಿನಲ್ ನಿರ್ಮಿಸುವುದು ಅನಿವಾರ್ಯ. ಇದರಿಂದ ಉಡುಪಿ ಕಾಸರಗೋಡು ಪುತ್ತೂರು ಧರ್ಮಸ್ಥಳ ಕಡೆಯಿಂದ ಬರುವ ಬಸ್‌ಗಳು ನಗರದೊಳಗೆ ಪ್ರವೇಶಿಸಬೇಕಾಗುವುದಿಲ್ಲ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ. ‘ಪಿ.ಎಂ– ಇ ಬಸ್ ಯೋಜನೆಯಡಿ ನಗರಕ್ಕೆ 100 ಎಲೆಕ್ಟ್ರಿಕ್ ಬಸ್‌ಗಳು ಹಾಗೂ ರಾಜ್ಯ ಸರ್ಕಾರದಿಂದ 50 ಎಲೆಕ್ಟ್ರಿಕ್ ಬಸ್‌ಗಳು ಮಂಜೂರಾಗಿವೆ. ಜೂನ್ ಅವುಗಳ ಸಂಚಾರ ಸಾಧ್ಯವಾಗಲಿದೆ. ಪಂಪ್‌ವೆಲ್ ಬಳಿ ಟರ್ಮಿನಲ್ ನಿರ್ಮಿಸಿದರೆ ವಾಹನ ದಟ್ಟಣೆ ಹೆಚ್ಚದಂತೆ ತಡೆಯಬಹುದು’ ಎಂದರು.