ಮಂಗಳೂರು: ಕಡತ ವಿಲೇವಾರಿ ಬಾಕಿ, ನವೀಕರಣಗೊಳ್ಳದ ವ್ಯಾಪಾರ ಪರವಾನಗಿ, ಕಾಲಮಿತಿಯೊಳಗೆ ವಿಲೇವಾರಿ ಆಗದ ಲೆಕ್ಕಪತ್ರ ವಿಭಾಗದಲ್ಲಿ ಬಿಲ್ಗಳು...

ವ್ಯಾಪಕ ಭ್ರಷ್ಟಾಚಾರದ ಕುರಿತು ಸಾರ್ವಜನಿಕರಿಂದ ಬಂದ ದೂರುಗಳ ತನಿಖೆ ನಡೆಸಲು ಲೋಕಾಯುಕ್ತರಿಂದ ಆದೇಶ ಪಡೆದು ಪಾಲಿಕೆ ಕೇಂದ್ರ ಕಚೇರಿಗೆ ಶನಿವಾರ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಲೋಕಾಯುಕ್ತ ಪೊಲೀಸರ ತಂಡವು ಪತ್ತೆ ಹಚ್ಚಿದ ಸಾಲು ಸಾಲು ಲೋಪಗಳಿವು.

ಪಾಲಿಕೆಯ ಕಂದಾಯ ವಿಭಾಗ, ಆರೋಗ್ಯ ವಿಭಾಗ, ಎಂಜಿನಿಯರ್ ವಿಭಾಗ, ಲೆಕ್ಕ ಪತ್ರ ವಿಭಾಗ,. ನಗರ ಯೋಜನಾ ವಿಭಾಗಗಳಷ್ಟೇ ಅಲ್ಲ ಸ್ವತಃ ಆಯುಕ್ತರ ಕಚೇರಿಯ ಕಡತ ವಿಲೇವಾರಿಯಲ್ಲೂ ಹಲವಾರು ನ್ಯೂನ್ಯತೆಗಳಿರುವುದನ್ನು ಲೋಕಾಯುಕ್ತ ಪೊಲೀಸರ ತಂಡವು ಪತ್ತೆ ಹಚ್ಚಿದೆ.

ಈ ಕುರಿತು ಸೋಮವಾರ ಪತ್ರಿಕಾ ಪ್ರಕರಣೆ ನೀಡಿರುವ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ (ಪ್ರಭಾರ) ಕುಮಾರಚಂದ್ರ ಪಾಲಿಕೆ ಭ್ರಷ್ಟಾಚಾರ ಕುರಿತು ಮಾಹಿತಿ ನೀಡಿದ್ದಾರೆ.

‘ಅನೇಕ ಉದ್ದಿಮೆ ಪರವಾನಗಿಗಳು ನವೀಕರಣಕ್ಕೆ ಬಾಕಿ ಇರುವ ವಿವರಗಳು ಉದ್ದಿಮೆ ಪರವಾನಗಿ ವೆಬ್ಸೈಟ್ನಲ್ಲಿ ಲಬ್ಯ ಇವೆ. ಅರ್ಜಿ ಬಂದ ಬಳಿಕವೂ ವ್ಯಾಪಾರ ಪರವಾನಿಗೆಗಳನ್ನು ನವೀಕರಿಸಿರುವುದಿಲ್ಲ ಮತ್ತು ಅವುಗಳಿಗೆ ಅನುಗುಣವಾದ ಶುಲ್ಕವನ್ನು ಸಂಗ್ರಹಿಸಿಲ್ಲ. ಎಂಜಿನಿಯರಿಂಗ್ ವಿಭಾಗದಲ್ಲೂ ಹಳೆಯ ಕಡತಗಳು ವಿಲೇವಾರಿಗೆ ಬಾಕಿ ಇವೆ. ಲೆಕ್ಕಪತ್ರ ವಿಭಾಗದಲ್ಲಿ ಬಿಲ್ಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡದೇ ಬಾಕಿ ಇಟ್ಟಿರುವುದು ಕಂಡುಬಂದಿದೆ‘ ಎಂದು ಅವರು ತಿಳಿಸಿದ್ದಾರೆ.

'ಪಾಲಿಕೆಯ ಆರೋಗ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅಧಿಕಾರಿಯೊಬ್ಬರು ನಿವೃತ್ತರಾಗಿ 15 ವರ್ಷಗಳ ಬಳಿಕವೂ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಪಾಲಿಕೆಯ ಆಡಳಿತಾತ್ಮಕ ಲೋಪದ ಸ್ಪಷ್ಟ ನಿದರ್ಶನವಿದು’ ಎಂದು ಅವರು ತಿಳಿಸಿದ್ದಾರೆ.

ಪಾಲಿಕೆ ಕೇಂದ್ರ ಕಚೇರಿಯ ಭ್ರಷ್ಟಾಚಾರದ ಬಗ್ಗೆ ಸಮಗ್ರ ವರದಿಯನ್ನು ಲೋಕಾಯುಕ್ತ ಕೇಂದ್ರ ಕಚೇರಿಗೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇಲ್ಲಿನ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಾದ ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಪಿ, ಇನ್ಸ್ಪೆಕ್ಟರ್ಗಳಾದ ಭಾರತಿ ಜಿ., ಚಂದ್ರಶೇಖರ್ ಕೆ.ಎನ್ ಮತ್ತು ಉಡುಪಿ ಲೋಕಾಯುಕ್ತ ಇನ್ಸ್ಪೆಕ್ಟರ್ಗಳಾದ ಮಂಜುನಾಥ, ರಾಜೇಂದ್ರ ನಾಯ್ಕ್ ಎಂ.ಎನ್ ಮತ್ತು ಸಿಬ್ಬಂದಿಯ ತಂಡ ಪಾಲಿಕೆ ಕಚೇರಿಯ ವಿವಿಧ ವಿಭಾಗಗಳ ಕಡತಗಳನ್ನು ಪರಿಶೀಲನೆ ನಡೆಸಿತ್ತು.

'ಒಳಚರಂಡಿಗೆ ಕಟ್ಟಡದ ನೀರು- ಕ್ರಮ ವಹಿಸದ ಪಾಲಿಕೆ'

‘ನಗರದ ಒಳಚರಂಡಿ ಮೇಲುಸ್ತುವಾರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಾಗೂ ಇತರ ಅಧಿಕಾರಿಗಳು ನಗರದ ತೋಡುಗಳಿಗೆ ಕಟ್ಟಡಗಳ ನೀರನ್ನು ಅನಧಿಕೃತವಾಗಿ ಹರಿಸುವವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ಹಲವಾರು ಪ್ರದೇಶಗಳಲ್ಲಿ ಚರಂಡಿಯ ನೀರು ಜನವಸತಿ ಪ್ರದೇಶಗಳಿಗೆ ಹರಿದಿದೆ’ ಎಂದು ಕುಮಾರಚಂದ್ರ ತಿಳಿಸಿದ್ದಾರೆ.

‘ದ್ರವತ್ಯಾಜ್ಯ ಸಂಸ್ಕರಣಾ ಘಟಕ (ಎಸ್ಟಿಪಿ) ಮತ್ತು ವೆಟ್ವೆಲ್ ಗಳ ನಿರ್ವಹಣೆಯೂ ಸರಿಯಾಗಿ ನಡೆಯುತ್ತಿಲ್ಲ. 25ಕ್ಕೂ ಹೆಚ್ಚು ವಸತಿ ಘಟಕಗಳಿರುವ ಅಪಾರ್ಟ್ ಮೆಂಟ್ ಸಮುಚ್ಚಯಗಳಿಂದ ಹೊರಬರುವ ಕೊಳಚೆ ನೀರನ್ನು ಸಂಸ್ಕರಿಸುವ ಸಾಮರ್ಥ್ಯ ಪಾಲಿಕೆಯ ಒಳಚರಂಡಿ ವ್ಯವಸ್ಥೆಗೆ ಇಲ್ಲ. ಆದರೂ ಹಲವಾರು ಅಪಾರ್ಟ್ಮೆಂಟ್ ಸಮುಚ್ಚಯಗಳಿಗೆ ಎಸ್ಟಿಪಿ ನಿರ್ಮಿಸಲು ಕಟ್ಟಡ ಮಾಲೀಕರಿಗೆ ಸೂಚಿಸದೇ ಒಳಚರಂಡಿ ಜಾಲಕ್ಕೆ ಶೌಚ ನೀರು ಹರಿಸಲು ಅನುಮತಿ ನೀಡಿರುವ ಮಾಹಿತಿ ಇದೆ. ಕಟ್ಟಡ ನಿರ್ಮಾಣದ ವೇಳೆ ಒಳಚರಂಡಿಗೆ ಸಂಬಂಧಿಸಿದ ಷರತ್ತುಗಳನ್ನು ಪಾಲನೇ ಮಾಡಲು ಒತ್ತಾಯಿಸದೆ ನಿರ್ಲಕ್ಷತನ ತೋರಲಾಗಿದೆ. ಇದು ನದಿ ಹಾಗೂ ತೋಡುಗಳ ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂಬ ದೂರುಗಳಿವೆ’ ಎಂದು ಅವರು ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.