ಮಂಗಳೂರು: ಬೆಳ್ತಂಗಡಿ ತಾಲ್ಲೂಕಿನ ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಬ್ಯಾರಿ ಸಮುದಾಯವನ್ನು ಶಾಸಕ ಹರೀಶ್ ಪೂಂಜ ಅವಹೇಳನ ಮಾಡಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಆರೋಪಿಸಿದೆ.

‘ಶಾಸಕ ಎಂಬುದನ್ನೇ ಮರೆತು ಧರ್ಮದ ವೇದಿಕೆಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಿರುವ ಪೂಂಜ ಶಾಸನ ಸಭೆಗೆ ಕಳಂಕ. ತಾವು ಸ್ವೀಕರಿಸಿದ್ದ ಪ್ರಮಾಣವಚನಕ್ಕೆ ವಿರುದ್ಧವಾಗಿ ಹರೀಶ್ ಪೂಂಜ ಜನಾಂಗ ದ್ವೇಷ ತೋರಿಸಿರುವುದು ಖಂಡನೀಯ. ಶಾಸಕ ಸ್ಥಾನದಲ್ಲಿ ಮುಂದುವರಿಯಲು ಯೋಗ್ಯರಲ್ಲ. ಅವರ ಶಾಸಕ ಸ್ಥಾನವನ್ನು ರದ್ದುಪಡಿಸಬೇಕು. ಅವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ. ಒತ್ತಾಯಿಸಿದ್ದಾರೆ.

‘ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಧರ್ಮದ ವಿಚಾರದಲ್ಲಿ ಸಡಿಲ ಮಾತುಗಳನ್ನಾಡಿ ಈಗಾಗಲೇ ಹಕ್ಕುಚ್ಯುತಿ ನೊಟೀಸ್ ಪಡೆದಿರುವ ಪೂಂಜ ಈಗ ಬ್ಯಾರಿ ಸಮುದಾಯವನ್ನು ಅಪಮಾನಿಸಿದ್ದಾರೆ. ಬ್ಯಾರಿ ಸಮುದಾಯದವರ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ. ಈ ಪ್ರಕರಣವನ್ನು ಸೇರಿಸಿ ವಿಧಾನಸಭೆ ಕಾರ್ಯಾಲಯ ಅವರ ವಿಚಾರಣೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ

‘ತೆಕ್ಕಾರು ಗ್ರಾಮದ ಸಾಮರಸ್ಯ ಕರಾವಳಿಗೆ ಮಾದರಿ. ಅಲ್ಲಿನ ಗೋಪಾಲಕೃಷ್ಣ ದೇವಸ್ಥಾನದ ಅಭಿವೃದ್ಧಿಗೆ ಬ್ಯಾರಿಗಳೂ ಸಹಕರಿಸಿದ್ದರು. ಬ್ರಹ್ಮಕಲಶೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಸಮಿತಿಯವರು ಬ್ಯಾರಿಗಳಿಗೆ ವಿಶೇಷ ಆತಿಥ್ಯ ನೀಡಿದ್ದರು. ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಶಾಸಕರು ಬ್ಯಾರಿ ಜನಾಂಗವನ್ನು ಅವಹೇಳನ ಮಾಡಿರುವುದು ಕ್ಷಮಿಸಲಾಗದ ಅಪರಾಧ. ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣವಿರುವ ಸಮಯದಲ್ಲಿ ಸೌಹಾರ್ದಕ್ಕೆ ಹುಳಿ ಹಿಂಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪೂಂಜ ತಮ್ಮ ಕೊಳಕು ನಾಲಿಗೆಯನ್ನು ಪ್ರದರ್ಶಿಸಿದ್ದಾರೆ’ ಎಂದು ಹೇಳಿದ್ದಾರೆ.
‘ಬ್ಯಾರಿಗಳನ್ನು ಹರೀಶ್ ಪೂಂಜ ಅವಹೇಳನ ಮಾಡಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗಮನಕ್ಕೆ ತಂದಿದ್ದೇನೆ. ಪೂಂಜ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.