ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಖಾದರ್ ಜನ್ಮದಿನಕ್ಕೆ ಅಜ್ಜಿಯ ಆಶೀರ್ವಾದ

Last Updated 12 ಅಕ್ಟೋಬರ್ 2022, 16:27 IST
ಅಕ್ಷರ ಗಾತ್ರ

ಮಂಗಳೂರು: ಶಾಸಕ ಯು.ಟಿ.ಖಾದರ್ ಅವರ ಜನ್ಮದಿನದಂದು ಅಭಿಮಾನಿಗಳು ಅಸೈಗೋಳಿಯ ಅಭಯ ಆಶ್ರಮಕ್ಕೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳಿಗೆ ಆಹಾರ ಹಂಚುವ ಕ್ರಮ ರೂಢಿಸಿಕೊಂಡಿದ್ದಾರೆ. ವರ್ಷದಂತೆ ಈ ಬಾರಿಯೂ ಬುಧವಾರ ಆಶ್ರಮಕ್ಕೆ ತೆರಳಿದಾಗ ಅಲ್ಲಿನ ವಾಸಿಯೊಬ್ಬರು ಶುಭಾಶಯ ಕೋರಲು ಫೋಟೊ ಪ್ರಿಂಟ್ ಹಾಕಿಸಿ, ಖಾದರ್ ಅವರಿಗೆ ಕಾಯುತ್ತಿದ್ದರು.

ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂಚಲಾಕ್ಷಿ ಮತ್ತು ಕಾರ್ಯಕರ್ತರು ಆಶ್ರಮಕ್ಕೆ ಭೇಟಿ ನೀಡಿದಾಗ, ಖಾದರ್ ಅವರಿಗೆ ಕಾಯುತ್ತಿದ್ದ ಸುಧಾ ಅವರಿಗೆ ನಿರಾಸೆಯಾಯಿತು.

ಭಾರತ್ ಜೋಡೊ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರಣ ಖಾದರ್ ಅವರಿಗೆ ಆಶ್ರಮಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ವಿಷಯ ತಿಳಿದ ಖಾದರ್, ದೂರವಾಣಿ ಮೂಲಕ ಸುಧಾ ಅವರನ್ನು ಸಂಪರ್ಕಿಸಿ, ಆಶೀರ್ವಾದ ಪಡೆದರು. ‘ದೇವರು ಅವರನ್ನು ಚೆನ್ನಾಗಿಟ್ಟಿರಲಿ. ನನ್ನಂಥಹ ಹಲವಾರು ಹಿರಿಯರ ಆಶೀರ್ವಾದ ಅವರ ಮೇಲಿದೆ’ ಎನ್ನುತ್ತ ಸುಧಾ ಭಾವುಕರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT