ಮಂಗಳೂರು: ‘ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ನೇರವಾಗಿ ಭಾಗಿಯಾಗಿದ್ದಾರೆ. ಸಮಗ್ರ ತನಿಖೆಗಾಗಿ ಈ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಬೇಕು’ ಎಂದು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಆರೋಪಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಹಾಸ್ ಹತ್ಯೆ ನಡೆಯುವ ವೇಳೆ ಆರೋಪಿಗಳಿಗೆ ರಕ್ಷಣೆ ಕೊಡುವ ರೀತಿಯಲ್ಲಿ 25 ಜನರು ಸುತ್ತ ಕೋಟೆ ನಿರ್ಮಿಸಿದ್ದರು. ಸ್ಥಳೀಯ ಕೆಲವರ ಸಹಕಾರದಲ್ಲಿ ಈ ಹತ್ಯೆ ನಡೆದಿದೆ. ಹತ್ಯೆಗೂ ಮುನ್ನ ಪೊಲೀಸರು ಮತ್ತು ಆರೋಪಿಗಳ ನಡುವೆ ಒಡಂಬಡಿಕೆ ನಡೆದಿರುವ ಸಾಧ್ಯತೆ ಇದೆ. ಹೀಗಾಗಿ, ಪೊಲೀಸ್ ವಾಹನ ಸ್ಥಳಕ್ಕೆ ಬಂದರೂ, ಸುಹಾಸ್ ರಕ್ಷಣೆ ಮಾಡಿಲ್ಲ. ಸ್ಥಳೀಯರು ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ’ ಎಂದರು.

‘ಆಯುಧ ಇಟ್ಟುಕೊಳ್ಳುವುದು ತಪ್ಪು, ಆದರೆ ಸುಹಾಸ್ ಆತ್ಮರಕ್ಷಣೆಗಾಗಿ ವಾಹನದಲ್ಲಿ ಇಟ್ಟುಕೊಂಡಿದ್ದ ಆಯುಧವನ್ನು ಪೊಲೀಸರು ಒತ್ತಾಯದಿಂದ ಖಾಲಿ ಮಾಡಿಸಿದ್ದರು. ಪೊಲೀಸರ ಸಹಕಾರದಲ್ಲಿ ಈ ಕೊಲೆ ನಡೆದಿದೆ. ಆರೋಪಿಗಳೇ ಪೊಲೀಸರಿಗೆ ಶರಣಾಗಿದ್ದಾರೆ. ಬಂಧನವಾದ ಬಳಿಕ ಪೊಲೀಸರು ಆರೋಪಿಗಳ ಮೈಮುಟ್ಟಿಲ್ಲ. ಸುಹಾಸ್ ಹತ್ಯೆಗೆ ಫಾಝಿಲ್ ಸಹೋದರ ₹5 ಲಕ್ಷ ನೀಡಿದ್ದ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಆದರೆ, ದುಬೈನಿಂದ ಇದಕ್ಕೆ ₹50 ಲಕ್ಷ ಹಣ ಸಂದಾಯವಾಗಿದೆ’ ಎಂಬ ಮಾಹಿತಿ ಇದೆ ಎಂದು ಆರೋಪಿಸಿದರು.

ಬಜಪೆ, ಸುರತ್ಕಲ್, ಪಣಂಬೂರು ಪೊಲೀಸ್ ಠಾಣೆಯ ಕೆಲ ಪೊಲೀಸರ ಮೊಬೈಲ್ ಫೋನ್ ಕರೆಗಳನ್ನು ಪರಿಶೀಲಿಸಿದರೆ ಎಲ್ಲ ವಿಷಯ ಬಹಿರಂಗವಾಗಲಿದೆ ಎಂದು ಹೇಳಿದರು.

‘ಬಜಪೆ ಸಮೀಪದ ಫ್ಯ್ಲಾಟ್ವೊಂದರಲ್ಲಿ ಹತ್ಯೆ ಪ್ರಕರಣದ ಆರೋಪಿಗಳು ವಾಸಿಸುತ್ತಿದ್ದಾರೆ. ಪ್ರಶಾಂತ್, ಸುಖಾನಂದ ಶೆಟ್ಟಿ ಹತ್ಯೆ ಆರೋಪಿಗಳು ಇದೇ ಫ್ಯ್ಲಾಟ್ನಲ್ಲಿ ಇದ್ದರು. ಸುಹಾಸ್ ಕೊಲೆ ಆರೋಪಿಗಳು ಕೂಡ ಇದೇ ಫ್ಯ್ಲಾಟ್ನಿಂದ ತೆರಳಿದ್ದಾರೆ ಎಂಬ ಮಾಹಿತಿ ಇದೆ. ಹಿಂದೂಗಳ ಮನೆಗೆ ಹೋಗಿ ಪರಿಶೀಲಿಸುವ ಪೊಲೀಸರು, ಯಾಕೆ ಈ ಫ್ಲ್ಯಾಟ್ ಪರಿಶೀಲನೆ ಮಾಡುತ್ತಿಲ್ಲ’ ಎಂದರು.

ಜಯಂತ್ ಕೋಟ್ಯಾನ್, ಸಂದೀಪ್, ಈಶ್ವರ್ ಕಟೀಲ್, ದಿನೇಶ್ ಪುತ್ರನ್, ರಂಜಿತ್, ರಾಜೇಶ್, ವಿಜಯ್ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.