ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ರೈಲ್ವೆ: ಜೂನ್‌ 10ರಿಂದ ಅ.31ರವರೆಗೆ ಕೊಂಕಣದಲ್ಲಿ ಸಮಯ ಬದಲಾವಣೆ

Published 10 ಮೇ 2024, 14:08 IST
Last Updated 10 ಮೇ 2024, 14:08 IST
ಅಕ್ಷರ ಗಾತ್ರ

ಮಂಗಳೂರು: ಕೊಂಕಣ ರೈಲ್ವೆ ಮೂಲಕ ಹಾದುಹೋಗುವ ರೈಲುಗಳ ಸಮಯ ಮಳೆಗಾಲದಲ್ಲಿ ಬದಲಾಗಲಿದೆ ಎಂದು ದಕ್ಷಿಣ ರೈಲ್ವೆಯ  ಪಾಲಕ್ಕಾಡ್ ವಿಭಾಗದ ಪ್ರಕಟಣೆ ತಿಳಿಸಿದೆ.

ಬದಲಾದ ಸಮಯ ಜೂನ್‌ 10ರಿಂದ ಅಕ್ಟೋಬರ್ 31ರ ವರೆಗೆ ಚಾಲ್ತಿಯಲ್ಲಿ ಇರಲಿದ್ದು ಮಾಹಿತಿಗೆ ನ್ಯಾಷನಲ್‌ ಟ್ರೇನ್‌ ಎನ್‌ಕ್ವಯರಿ ಸಿಸ್ಟಂ ವೆಬ್‌ಸೈಟ್‌ (https://enquiry.indianrail.gov.in/mntes) ಸಂದರ್ಶಿಸಬಹುದಾಗಿದೆ ಎಂದು ತಿಳಿಸಲಾಗಿದೆ.

ಸಮಯ ಬದಲಾದ ರೈಲುಗಳು: ಎರ್ನಾಕುಳಂ ಜಂಕ್ಷನ್‌–ಪುಣೆ ಜಂಕ್ಷನ್‌ (ರೈಲು ಸಂಖ್ಯೆ: 22149) ಮತ್ತು ಎರ್ನಾಕುಳಂ ಜಂಕ್ಷನ್‌–ಹಜರತ್ ನಿಜಾಮುದ್ದೀನ್ ಜಂಕ್ಷನ್ (ರೈಲು ಸಂಖ್ಯೆ:22655) ರೈಲುಗಳು ಮುಂಜಾನೆ 5.15ರ ಬದಲು ಮುಂಜಾನೆ 2.15ಕ್ಕೆ ಹೊರಡಲಿವೆ. ಮಡಗಾಂವ್‌ ಜಂಕ್ಷನ್‌–ಮಂಗಳೂರು ಸೆಂಟ್ರಲ್‌ (10107) ರೈಲು ಮುಂಜಾನೆ 4 ಗಂಟೆಯ ಬದಲು ಮುಂಜಾನೆ 4.40ಕ್ಕೆ ಹೊರಡಲಿದೆ. ಕೊಚ್ಚುವೇಲಿ–ಯೋಗ್ ನಗರಿ ಋಷಿಕೇಶ್ (22659), ಕೊಚ್ಚುವೇಲಿ–ಚಂಡೀಗಢ (12217), ಕೊಚ್ಚುವೇಲಿ–ಅಮೃತಸರ (12483) ರೈಲುಗಳು ಬೆಳಿಗ್ಗೆ 9.10ರ ಬದಲು ಮುಂಜಾನೆ 4.50ಕ್ಕೆ ಹೊರಡಲಿವೆ.

ತಿರುನಲ್ವೇಲಿ ಜಂಕ್ಷನ್‌–ಜಾಮ್‌ನಗರ್ (19577) ಮತ್ತು ತಿರುನಲ್ವೇಲಿ ಜಂಕ್ಷನ್‌–ಗಾಂಧಿಧಾಮ್‌ (20923) ರೈಲುಗಳು ಬೆಳಿಗ್ಗೆ 8ರ ಬದಲು ಮುಂಜಾನೆ 5.15ಕ್ಕೆ, ಕೊಚ್ಚುವೇಲಿ–ಲೋಕಮಾನ್ಯ ತಿಲಕ್ ಟರ್ಮಿನಲ್‌ (‌12202) ರೈಲು ಬೆಳಿಗ್ಗೆ 9ರ ಬದಲು ಬೆಳಿಗ್ಗೆ 7.45ಕ್ಕೆ, ಮಡಗಾಂವ್ ಜಂಕ್ಷನ್‌–ಮಂಗಳೂರು ಸೆಂಟ್ರಲ್‌ (06601) ರೈಲು ಮಧ್ಯಾಹ್ನ 2 ಗಂಟೆಯ ಬದಲಿಗೆ ಮಧ್ಯಾಹ್ನ 3 ಗಂಟೆಗೆ, ಮಡಗಾಂವ್ ಜಂಕ್ಷನ್‌–ಮಂಗಳೂರು ಸೆಂಟ್ರಲ್‌ (20645) ರೈಲು ಸಂಜೆ 6.10ರ ಬದಲು ಸಂಜೆ 5.35ಕ್ಕೆ, ಕೊಚ್ಚುವೇಲಿ–ಇಂದೋರ್ ಜಂಕ್ಷನ್ (20931) ಮತ್ತು ಕೊಚ್ಚುವೇಲಿ–ಪೋರ್‌ಬಂದರ್‌ (20909) ರೈಲು ಬೆಳಿಗ್ಗೆ 11.15ರ ಬದಲು ಬೆಳಿಗ್ಗೆ 9.10ಕ್ಕೆ ಹೊರಡಲಿದೆ. 

ಎರ್ನಾಕುಳಂ ಜಂಕ್ಷನ್‌–ಹಜರತ್‌ ನಿಜಾಮುದ್ದೀನ್‌ ಜಂಕ್ಷನ್‌ (12617) ರೈಲು ಮಧ್ಯಾಹ್ನ 1.25ರ ಬದಲು ಬೆಳಿಗ್ಗೆ 10.30ಕ್ಕೆ, ಕೊಯಮತ್ತೂರು ಜಂಕ್ಷನ್‌–ಹಿಸಾರ್‌ (22476) ರೈಲು ಮಧ್ಯಾಹ್ನ 2.55ರ ಬದಲು ಮಧ್ಯಾಹ್ನ 1.30ಕ್ಕೆ, ಮಂಗಳೂರು ಸೆಂಟ್ರಲ್‌–ಲೋಕಮಾನ್ಯ ತಿಲಕ್ ಟರ್ಮಿನಲ್ (12620) ರೈಲು ಮಧ್ಯಾಹ್ನ 2.20ರ ಬದಲು ಮಧ್ಯಾಹ್ನ 12.45ಕ್ಕೆ, ಎರ್ನಾಕುಳಂ ಜಂಕ್ಷನ್‌–ಮಡಗಾಂವ್ ಜಂಕ್ಷನ್‌ (10216) ರೈಲು ಬೆಳಿಗ್ಗೆ 10.40ರ ಬದಲು ಮಧ್ಯಾಹ್ನ 1.25ಕ್ಕೆ, ತಿರುವನಂತಪುರ ಸೆಂಟ್ರಲ್‌–ಹಜರತ್‌ ನಿಜಾಮುದ್ದೀನ್‌ ಜಂಕ್ಷನ್‌ (12431) ಸಂಜೆ 7.15ರ ಬದಲು ಮಧ್ಯಾಹ್ನ 2.40ಕ್ಕೆ, ಮಂಗಳೂರು ಜಂಕ್ಷನ್‌–ಮುಂಬೈ ಸಿಎಸ್‌ಟಿ (12134) ಮಧ್ಯಾಹ್ನ 2ರ ಬದಲು ಸಂಜೆ 4.35ಕ್ಕೆ, ಎರ್ನಾಕುಳಂ ಜಂಕ್ಷನ್‌–ಅಜ್ಮೀರ್‌ ಜಂಕ್ಷನ್‌ (12977) ರಾತ್ರಿ 8.25ರ ಬದಲು ಸಂಜೆ 6.50ಕ್ಕೆ, ಮಡಗಾಂವ್ ಜಂಕ್ಷನ್‌–ಎರ್ನಾಕುಳಂ ಜಂಕ್ಷನ್‌ (10215) ಸಂಜೆ 7.30ರ ಬದಲು ರಾತ್ರಿ 9ಕ್ಕೆ, ತಿರುವನಂತಪುರ ಸೆಂಟ್ರಲ್‌–ಹಜರತ್ ನಿಜಾಮುದ್ದೀನ್‌ ಜಂಕ್ಷನ್‌ ಶುಕರವಾರ ತಡರಾತ್ರಿ 12.50ರ ಬದಲು ಶುಕ್ರವಾರ ರಾತ್ರಿ 10 ಗಂಟೆಗೆ ಹೊರಡಲಿದೆ ಎಂದು ತಿಳಿಸಲಾಗಿದೆ.

ಮಂಗಳೂರು ಸೆಂಟ್ರಲ್‌
ಮಂಗಳೂರು ಸೆಂಟ್ರಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT