ಮೂಡುಬಿದಿರೆ: ತಾಲ್ಲೂಕಿನ ವಿವಿಧೆಡೆ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಎರಡು ಮನೆಗಳಿಗೆ ಹಾನಿಯಾಗಿದೆ.

ತೋಡಾರು ಗ್ರಾಮದ ಪಡುಪೆರಳಕಟ್ಟೆ ಎಂಬಲ್ಲಿ ಬುಧವಾರ ರಾತ್ರಿ ಶಕುಂತಳಾ ಶೆಟ್ಟಿ ಅವರ ಮನೆಗೆ ಮರ ಬಿದ್ದು ಮನೆ ಹಾಗೂ ಶೌಚಾಲಯಕ್ಕೆ ಹಾನಿಯಾಗಿದೆ.

ಶಿರ್ತಡಿ ಗ್ರಾಮದ ದಡ್ಡಲ್ ಪಲ್ಕೆ ಎಂಬಲ್ಲಿ ಭಾರಿ ಗಾಳಿ ಮಳೆಗೆ ಕೂಚ ಅವರ ಮನೆಯ ಹೆಚ್ಚಿನ ಭಾಗದ ಹಂಚು ಹಾರಿ ಹೋಗಿ ಮನೆಯಲ್ಲಿ ಸಂಗ್ರಹಗೊಂಡ ಮಳೆ ನೀರಿನಿಂದ ಗೋಡೆ ಸಂಪೂರ್ಣ ಹಾನಿಯಾಗಿದೆ. ಮುಂಜಾಗೃತಾ ಕ್ರಮವಾಗಿ ಈ ಮನೆಯವರು ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಕಂದಾಯ ನಿರೀಕ್ಷಕ ಮಂಜುನಾಥ ಹಾಗೂ ಗ್ರಾಮಕರಣಿಕ ಮಹೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಲಾ ಕಾಲೇಜುಗಳಿಗೆ ರಜೆ:ನಿರಂತರ ಮಳೆ ಹಿನ್ನೆಲೆಯಲ್ಲಿ ಮೂಡುಬಿದಿರೆ ತಾಲ್ಲೂಕಿನ ಶಾಲೆ, ಕಾಲೇಜುಗಳಿಗೆ ತಾಲ್ಲೂಕು ತಹಶಿಲ್ದಾರ್ ಶ್ರೀಧರ್.ಎಸ್ ಮುಂದಲಮನಿ ಶುಕ್ರವಾರ(ಜು.25) ರಜೆ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.