ಮಂಗಳೂರು: ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕ ದಲ್ಲಿ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊ ಕೆಮಿಕಲ್ ಸಂಸ್ಥೆ (ಎಂಆರ್ಪಿಎಲ್) ₹1,445 ಕೋಟಿ ನಿವ್ವಳ ಲಾಭ ಗಳಿಸಿದೆ.

ಇಲ್ಲಿ ನಡೆದ ಸಂಸ್ಥೆಯ ಆಡಳಿತ ಮಂಡಳಿಯ 272ನೇ ಸಭೆಯಲ್ಲಿ ಮೂರನೇ ತ್ರೈಮಾಸಿಕದ ಆರ್ಥಿಕ ಫಲಿತಾಂಶಗಳನ್ನುಅಂಗೀಕರಿಸಲಾಯಿತು.

ಈ ತ್ರೈಮಾಸಿಕದಲ್ಲಿ ಸಂಸ್ಥೆ ಒಟ್ಟಾರೆ ₹29,720 ಕೋಟಿ ವಹಿವಾಟು ನಡೆಸಿ ₹2,214 ಕೋಟಿ ತೆರಿಗೆಪೂರ್ವ ಲಾಭ ಗಳಿಸಿದೆ. ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ಸಂಸ್ಥೆ ₹25,601 ಕೋಟಿ ವಹಿವಾಟು ನಡೆಸಿ ₹469 ಕೋಟಿ ತೆರಿಗೆ ಪೂರ್ವ ಲಾಭ ಹಾಗೂ ₹304 ಕೋಟಿ ನಿವ್ವಳ ಲಾಭ ದಾಖಲಿಸಿತ್ತು.

ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಸಂಸ್ಥೆ ₹76,661 ಕೋಟಿ ವಹಿವಾಟು ನಡೆಸಿ ₹1,812 ಕೋಟಿ ನಿವ್ವಳ ಲಾಭ ದಾಖಲಿಸಿದಂತಾಗಿದೆ. ಸಂಸ್ಥೆಯ ಒಟ್ಟು ಸಾಲದ ಪ್ರಮಾಣ ₹12,867 ಕೋಟಿಯಿಂದ ₹9,290 ಕೋಟಿಗೆ ಇಳಿಕೆಯಾಗಿದೆ.

ಮೂರನೇ ತ್ರೈಮಾಸಿಕದಲ್ಲಿ ಸಂಸ್ಥೆ 47 ಲಕ್ಷ ಟನ್ನಷ್ಟು ಕಚ್ಚಾತೈಲ ಸಂಸ್ಕರಣೆ ಮಾಡಿದೆ. ಈ ಹಣಕಾಸು ವರ್ಷದ ಒಂಬತ್ತು ತಿಂಗಳಲ್ಲಿ ಒಟ್ಟು 1.26 ಕೋಟಿ ಟನ್ ಕಚ್ಚಾತೈಲ ಸಂಸ್ಕರಣೆ ನಡೆಸಿದಂತಾಗಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಈ ಪ್ರಮಾಣ ಕ್ರಮವಾಗಿ 46 ಲಕ್ಷ ಟನ್ ಹಾಗೂ 1.35 ಕೋಟಿ ಟನ್ ಇತ್ತು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.