ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಿಪು: BJP ಕಾರ್ಯಕರ್ತರಿಗೆ ಚೂರಿ ಇರಿತ ಪ್ರಕರಣ; ಐವರ ಬಂಧನ

Published 10 ಜೂನ್ 2024, 5:13 IST
Last Updated 10 ಜೂನ್ 2024, 5:13 IST
ಅಕ್ಷರ ಗಾತ್ರ

ಮುಡಿಪು (ದಕ್ಷಿಣ ಕನ್ನಡ): ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಯುಕ್ತ ಭಾನುವಾರ ರಾತ್ರಿ ವಿಜಯೋತ್ಸವ ಮುಗಿಸಿ ಮರಳುತ್ತಿದ್ದ ಬಿಜೆಪಿಯ ಇಬ್ಬರು ಕಾರ್ಯಕರ್ತರಿಗೆ ಉಳ್ಳಾಲ ತಾಲ್ಲೂಕಿನ ಬೋಳಿಯಾರ್‌ನಲ್ಲಿ ಚೂರಿಯಿಂದ ಇರಿಯಲಾಗಿದೆ. ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಬೋಳಿಯಾರ್‌ ನಿವಾಸಿಗಳಾದ ಮೊಹಮ್ಮದ್ ಶಾಕಿರ್ (28), ಅಬ್ದುಲ್ ರಜಾಕ್‌ (40), ಅಬೂಬಕರ್ ಸಿದ್ಧಿಕ್‌ (35), ಸವದ್‌ (18), ಮೋನು ಅಲಿಯಾಸ್‌ ಹಫೀಜ್‌ (24) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರಾಗಿರುವ ಇನ್ನೋಳಿ ಧರ್ಮನಗರದ ನಿವಾಸಿಗಳಾದ ಹರೀಶ್ (41) ಹಾಗೂ ನಂದಕುಮಾರ (24) ಚೂರಿ ಇರಿತಕ್ಕೆ ಒಳಗಾದವರು. ಅದೇ ಊರಿನ ಕಿಶನ್‌ ಕುಮಾರ್ ಹಲ್ಲೆಗೊಳಗಾದವರು. ಚೂರಿ
ಇರಿತಕ್ಕೊಳಗಾದ ಇಬ್ಬರು ಗಾಯಾಳುಗಳಿಗೆ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT