ಮೂಲ್ಕಿ: ಅಶಕ್ತ ಕಲಾವಿದರ ಬದುಕಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಶಕ್ತಿ ತುಂಬಿದೆ. ಕಲಾವಿದರ ವೈಯಕ್ತಿಕ ಬದುಕಿನ ಸತ್ಯವನ್ನು ಶೋಧಿಸಿದ ಪಟ್ಲ ಅವರಿಂದ ಯಕ್ಷಗಾನದಲ್ಲಿ ಹೊಸತನದ ಜತೆಗೆ ದಾನಿಗಳು, ಯಕ್ಷಗಾನ ಆಸಕ್ತರು ಹೆಚ್ಚಾಗಿದ್ದಾರೆ ಎಂದು ಸುರತ್ಕಲ್ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್ ಹೇಳಿದರು.

ಮೂಲ್ಕಿ ಬಳಿಯ ಪಾವಂಜೆಯಲ್ಲಿ ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಕೇಂದ್ರ ಮಹಿಳಾ ಫಟಕದ ಒಂಭತ್ತನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ ಮಾತನಾಡಿ, ಕೇಂದ್ರೀಯ ಮಹಿಳಾ ಘಟಕ ಕಳೆದ ಒಂಬತ್ತು ವರ್ಷಗಳಿಂದ ಕಲಾ ಸೇವೆ ಮಾಡುತ್ತಾ ಬಂದಿದೆ. ಕೇಂದ್ರೀಯ ಘಟಕ ಎಲ್ಲಾ ಕಡೆ ವಿಸ್ತರಣೆಯಾಗಲಿ ಎಂದರು.

ಈ ಸಂದರ್ಭದಲ್ಲಿ ಸುರತ್ಕಲ್ ದುರ್ಗಾಂಬ ಮಹಿಳಾ ತಾಳಮದ್ದಲೆ ಬಳಗದ ಅಧ್ಯಕ್ಷೆ ಸುಲೋಚನ ರಾವ್ ತಡಂಬೈಲ್, ಕೆರೆಕಾಡು ಮಕ್ಕಳ ಮೇಳದ ರಂಗಸಹಾಯಕಿ ರೇಷ್ಮಾರನ್ನು ಸನ್ಮಾನಿಸಲಾಯಿತು. ಪೂಜಾ ಕೆರೆಕಾಡು ಅವರಿಗೆ ಯಕ್ಷಧ್ರುವ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಲಾ ಪೋಷಕರಾದ ಶಕುಂತಲಾ ರಮಾನಂದ ಭಟ್ ಇಡ್ಯಾ, ರೂಪರಾಣಿ ಶೆಟ್ಟಿ ಬೆಳ್ಮಣ್, ಆಶಾ ಪ್ರಭಾಕರ ರಾವ್, ಕವಿತಾ ಶಾಸ್ತ್ರಿ, ಸರೋಜ ಟಿ.ಶೆಟ್ಟಿ, ರಾಜೇಶ್ವರಿ ಡಿ.ಶೆಟ್ಟಿ, ವಿದ್ಯಾ ಚಂದ್ರಹಾಸ ಶೆಟ್ಟಿ ಬಂಟ್ವಾಳ, ಕೇಂದ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿ.ಎ.ಸುದೇಶ್ಕುಮಾರ್ ರೈ, ಕೇಂದ್ರೀಯ ಮಹಿಳಾ ಘಟಕದ ಗೌರವಾಧ್ಯಕ್ಷೆ ಆರತಿ ಆಳ್ವ, ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ, ಪೂರ್ಣಿಮಾ ಶಾಸ್ತ್ರಿ ಹಾಜರಿದ್ದರು. ಡಾ. ಸುಧಾ ಚಂದ್ರಶೇಖರ ಶೆಟ್ಟಿ, ವಸುಂಧರ ಹರೀಶ್ ಶೆಟ್ಟಿ ನಿರ್ವಹಿಸಿದರು. ಬಳಿಕ ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ಪಾವಂಜೆ ಮೇಳದವರಿಂದ ಛಾಯಾನಂದನ ಯಕ್ಷಗಾನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.