ಮೂಲ್ಕಿ: ಇಲ್ಲಿನ ಬಡಗ ಎಕ್ಕಾರು ಸರ್ಕಾರಿ ಪ್ರೌಢಶಾಲೆ ಬಾಲಕಿಯರ ಕೊಕ್ಕೊ ತಂಡವು ತುಮಕೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಎಚ್.ಸಿ.ಎಲ್.ಫೌಂಡೇಷನ್ ವತಿಯಿಂದ ನಡೆದ ಸ್ಪೋರ್ಟ್ಸ್ ಫಾರ್ ಚೇಂಜ್ ಏಳನೇ ಆವೃತ್ತಿಯ ದಕ್ಷಿಣ ಭಾರತ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಗೆದ್ದುಕೊಂಡಿದೆ.

ಲಕ್ನೋದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದೆ.

ಲೀಗ್ ಕಮ್ ನಾಕ್ ಔಟ್ ಹಂತದಲ್ಲಿ ಕೇರಳ ತಂಡವನ್ನು ಒಂದು ಇನ್ನಿಂಗ್ಸ್ ಅಂತರದಲ್ಲಿ, ತೆಲಂಗಾಣ ತಂಡವನ್ನು 5 ಅಂಕಗಳ ಅಂತರದಲ್ಲಿ, ಆಂಧ್ರಪ್ರದೇಶದ ತಂಡವನ್ನು ಒಂದು ಇನ್ನಿಂಗ್ಸ್ ಅಂತರದಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿತ್ತು.

ಫೈನಲ್ ಪಂದ್ಯಾಟದಲ್ಲಿ ತಮಿಳುನಾಡು ವಿರುದ್ಧ 4 ಅಂಕ ಅಂತರದ ಜಯ ಗಳಿಸಿತು. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕಿ ವಿದ್ಯಾಲತಾ ತರಬೇತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.