ವಿಟ್ಲ: ನಾಗನ ಆರಾಧನೆ ಎಂದರೆ ಅದು ಪ್ರಕೃತಿಯ ಆರಾಧನೆಯಾಗಿದೆ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಗುರುದೇವದತ್ತ ಸಂಸ್ಥಾನದಲ್ಲಿ ನಡೆದ ನಾಗರ ಪಂಚಮಿ ಮಹೋತ್ಸವ, ಸಾರ್ವಜನಿಕ ಆಶ್ಲೇಷ ಬಲಿಪೂಜೆಯ ಬಳಿಕ ಅವರು ಅನುಗ್ರಹ ಸಂದೇಶ ನೀಡಿದರು.

ಸದ್ಭಾವನೆಯಿಂದ ಮಾಡಿದ ಸೇವೆಯಲ್ಲಿ ಯಶಸ್ಸು ಹೆಚ್ಚು. ನಾಗಮಂಡಲದ ಮಹತ್ವ ಅಪಾರವಾದುದು. ತಳಿರು ತೋರಣಗಳ ಅಲಂಕಾರಕ್ಕೆ ಅದರದ್ದೇ ಆದ ಮಹತ್ವವಿದೆ. ಪ್ರತಿಯೊಂದೂ ಆರಾಧನೆಯಲ್ಲಿ ವೈಜ್ಞಾನಿಕವಾದ ಸತ್ಯ ಅಡಗಿದೆ. ಪರಿಶುದ್ಧವಾದ ಮನಸ್ಸಿನಲ್ಲಿ ವ್ಯತ್ಯಾಸವಾದಾಗ ಅಪಾಯ ಹೆಚ್ಚು. ಮೂಲ ನಂಬಿಕೆಯನ್ನು ಗಟ್ಟಿಗೊಳಿಸುವ ಕೆಲಸವಾಗಬೇಕು ಎಂದರು.

ಸಹೋದರತ್ವ ನಾಗರಪಂಚಮಿಯಲ್ಲಿ ಅಡಗಿದೆ. ಅಂತರ ಹೆಚ್ಚಾಗಿ ಸಂಬಂಧಗಳು ದೂರವಾಗುತ್ತಿದೆ. ನಮ್ಮೊಳಗಿನ ಕಂದಕವನ್ನು ಪ್ರೀತಿಭಾವದಿಂದ ಸರಿಪಡಿಸಿಕೊಳ್ಳಬಹುದು ಎಂದರು.

ತಂತ್ರಜ್ಞಾನಗಳು ಹೆಚ್ಚಾದಂತೆ ಆದ್ಯಾತ್ಮಿಕವಾಗಿ ನಾವು ಹಿಂದೆ ಬೀಳುತ್ತಿದ್ದೇವೆ. ಆರೋಗ್ಯಕರ ವಿಚಾರಗಳ ಬಗ್ಗೆ ನಮ್ಮ ಒಲವು ಹೆಚ್ಚಿರಬೇಕು. ವಿಜ್ಞಾನ ಮತ್ತು ಆದ್ಯಾತ್ಮ ಜೊತೆಜೊತೆಗೆ ಸಾಗಬೇಕು. ಪ್ರಕೃತಿಯ ಒಳಗೆ ಇರುವ ಭಗವಂತನನ್ನು ಮರೆಯಬಾರದು ಎಂದರು.

ಸಾಧ್ವೀ ಮಾತಾನಂದಮಯೀ ಸಾನ್ನಿಧ್ಯ ವಹಿಸಿದ್ದರು.

ಪ್ರಾತಃಕಾಲ ಆರಾಧ್ಯ ದೇವರಿಗೆ ಮಹಾಪೂಜೆ, ಗಣಪತಿ ಹವನ, ಬಳಿಕ ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ಅಭಿಷೇಕ, ಸಾಮೂಹಿಕ ಆಶ್ಲೇಷ ಬಲಿಪೂಜೆ ನಡೆಯಿತು. ಮಧ್ಯಾಹ್ನ ಕಲ್ಪೋಕ್ತ ಪೂಜೆ, ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಮಹಾಸಂತರ್ಪಣೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.