ಮಂಗಳವಾರ, ಜನವರಿ 19, 2021
17 °C

ನಲಪಾಡ್‌ ಬೆಂಬಲಿಗರಿಂದ ಅಪಹರಣಕ್ಕೆ ಯತ್ನ: ಸ್ಥಳೀಯರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಯುವ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನಲಪಾಡ್‌ ಬೆಂಬಲಿಗರು ಮಗುವಿನ ಅಪಹರಣದ ಆರೋಪ ಎದುರಿಸಿದ್ದು, ಕೆಲಕಾಲ ಕೊಣಾಜೆ ಠಾಣೆಯ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ನಲಪಾಡ್‌ ಅವರಿಗೆ ಮತಯಾಚನೆಗಾಗಿ ಬೆಂಗಳೂರಿನಿಂದ ಬೆಂಬಲಿಗರು ಮುಡಿಪುಗೆ ಬಂದಿದ್ದರು. ಮರಳುವಾಗ ದೇರಳಕಟ್ಟೆಯ ಬಳಿ ಬೆಂಬಲಿಗರ ಕಾರು ಮಗುವಿಗೆ ಡಿಕ್ಕಿಯಾಗಿದೆ. ಇದರಿಂದ ಮಗು ಗಾಯಗೊಂಡಿದೆ. ಸ್ಥಳದಲ್ಲಿ ಜಮಾಯಿಸಿದ ಜನರು, ಬೆಂಬಲಿಗರು ಮಗುವಿನ ಅಪಹರಣಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿದರು.

ಕಾರಿನಲ್ಲಿದ್ದವರನ್ನು ಕೊಣಾಜೆ ಠಾಣೆಗೆ ಕರೆತರಲಾಗಿತ್ತು. ಠಾಣೆಯ ಎದುರು ಯುವ ಕಾಂಗ್ರೆಸ್‌ ಕಾರ್ಯಕರ್ತರು ಜಮಾಯಿಸಿದ್ದರು. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು