ಎಂಬಿಕೆ ಲಾಜಿಸ್ಟಿಕ್ಸ್ ಎಜೆನ್ಸಿಯ ಸಿಮಾ ಮರೈನ್ ಇಂಡಿಯಾಗೆ ಸೇರಿದ ಈ ಹಡಗು ಜೆಎಸ್‌ಡಬ್ಲ್ಯು ಕಂಟೈನರ್ ಟರ್ಮಿನಲ್‌ನಲ್ಲಿ ನಿಂತಿದೆ. ಈ ಹಡಗಿನಲ್ಲಿ 1,011 ಟಿಇಯು ಆಮದು ಕಂಟೈನರ್ ಮತ್ತು 925 ಟಿಇಯು ರಫ್ತು ಕಂಟೈನರ್‌ಗಳು ಇದ್ದು, ಸೋಮವಾರ ಇಲ್ಲಿಂದ ಮುಂದಕ್ಕೆ ಹೊರಟಿತು. ನವ ಮಂಗಳೂರು ಬಂದರಿನಲ್ಲಿ ಈ ವರೆಗೆ ನಿರ್ವಹಿಸಿದ ಅತಿದೊಡ್ಡ ಪಾರ್ಸೆಲ್ ಗಾತ್ರದ ಕಂಟೈನರ್ ಹಡಗು ಇದಾಗಿದೆ. ಈ ಹಿಂದೆ 2021 ಜೂನ್ 14ರಂದು ಎಂ.ವಿ. ಎಸ್‌ಎಸ್‌ಎಲ್ ಬ್ರಹ್ಮಪುತ್ರ ಹಡಗು 1,521 ಟಿಇಯುಗಳೊಂದಿಗೆ ಬಂದರಿಗೆ ಬಂದಿತ್ತು.