ಮಂಗಳೂರು: ಸ್ಟಾಕ್ ಟ್ರೇಡಿಂಗ್ನಲ್ಲಿ ಹೂಡಿಕೆ ಹಾಗೂ ದುಬೈನಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ಆನ್ಲೈನ್ನಲ್ಲಿ ಹಣ ಕಟ್ಟಿಸಿಕೊಂಡು ₹ 17.82 ಲಕ್ಷ ವಂಚಿಸಿದ ಬಗ್ಗೆ ಸಂತ್ರಸ್ತ ವ್ಯಕ್ತಿಯೊಬ್ಬರು ದೂರು ನೀಡಿದ್ದು, ನಗರ ದಕ್ಷಿಣ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

‘ನನ್ನ ಫೇಸ್ ಬುಕ್ ಖಾತೆಯಲ್ಲಿ ಸ್ಟಾಕ್ ಟ್ರೇಡಿಂಗ್ ಕುರಿತು 2023ರ ಡಿ. 17ರಂದು ಜಾಹಿರಾತು ಕಾಣಿಸಿಕೊಂಡಿತ್ತು. ಅದರ ಕೊಂಡಿಯನ್ನು ಕ್ಲಿಕ್ ಮಾಡಿದಾಗ ‘2 ವೆಲ್ತ್ ಟ್ರೈನಿಂಗ್ ಕ್ಯಾಂಪ್’ ಎಂಬ ವಾಟ್ಸಪ್ ಗ್ರೂಪ್ ತೆರೆದುಕೊಂಡಿತ್ತು. ಮರಿಲೇನಾ ಮತ್ತು ಜೊನಾಥನ್ ಸೈಮನ್ ಎಂಬುವರು ಅದರ ಮುಖ್ಯಸ್ಥರಾಗಿದ್ದರು. ಆ ಗ್ರೂಪ್ಗೆ ಸೇರಿಕೊಂಡ ಬಳಿಕ ಗೂಗಲ್ ಪ್ಲೇ ಸ್ಟೋರ್ನಲ್ಲಿ ‘ಅಲ್ಪ್ಯಾಕ್ಸಿಸ್ ಪ್ರೊ’ ಆ್ಯಪ್ ಡೌನ್ ಲೋಡ್ ಮಾಡಿ ಹಣ ಹಾಕಿದರೆ, ನಿತ್ಯ ಸರಾಸರಿ ಶೇ 18ರಷ್ಟು ಲಾಭಾಂಶ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ 2024ರ ಜ.4ರಿಂದ ಮಾರ್ಚ್ 4ರವರೆಗೆ ಅವರು ಸೂಚಿಸಿದ ಖಾತೆಗಳಿಗೆ ಒಟ್ಟು ₹ 15.52 ಲಕ್ಷ ಹಣ ಪಾವತಿಸಿದ್ದೆ. ಆ ಹಣವನ್ನು ಮರಳಿಸದೆ ವಂಚಿಸಿದ್ದಾರೆ ಎಂಬುದಾಗಿ ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ಆರೋಪಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಫೇಸ್ ಬುಕ್ನಲ್ಲಿ ಪೌಲ್ಸನ್ ಆಗಸ್ಟಿನ್ ಎಂಬಾತ ಪರಿಚಯವಾಗಿದ್ದು, ಆತ ದುಬೈನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ನನ್ನ ಪರಿಚಯದ ಇಬ್ಬರಿಂದ ತಲಾ ₹ 2.30 ಹಣ ಪಡೆದು ಆತನಿಗೆ ನೀಡಿದ್ದೆ. ಆದರೆ ಆತ ಅವರಿಗೆ ಉದ್ಯೋಗವನ್ನು ಒದಗಿಸದೇ, ಹಣವನ್ನೂ ಮರಳಿಸದೇ ವಂಚಿಸಿದ್ದ. ಆತನನ್ನು ಪರಿಚಯಿಸಿದ ಇಬ್ಬರಿಗೆ ನಾನು ತಲಾ ₹ 1 ಲಕ್ಷ ನೀಡಿದ್ದೆ ಎಂದೂ ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ಆರೋಪಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.