ಮಂಗಳೂರು: ಹೋಟೆಲ್, ರೆಸ್ಟೋರೆಂಟ್ ಜಾಹೀರಾತುಗಳಿಗೆ ಆನ್ಲೈನ್ನಲ್ಲಿ 5 ಸ್ಟಾರ್ ರೇಟಿಂಗ್ ನೀಡಿದರೆ ಕಮಿಷನ್ ಸಿಗುತ್ತದೆ ಎಂಬ ಆಸೆಯಿಂದ ವ್ಯಕ್ತಿಯೊಬ್ಬರು ಆನ್ಲೈನ್ ವಂಚನೆಗೆ ಒಳಗಾಗಿ ₹ 20.62 ಲಕ್ಷ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸಂತ್ರಸ್ತ ವ್ಯಕ್ತಿ ನೀಡಿದ ದೂರಿನ ಆಧಾರದಲ್ಲಿ ಬಜಪೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

‘ಇನ್ಸ್ಟಾಗ್ರಾಮ್ನಲ್ಲಿ ಮನೆಯಲ್ಲೇ ಕಲಸ ಮಾಡುವ ಹಾಗೂ ಅರೆಕಾಲಿಕ ಉದ್ಯೋಗದ ಕುರಿತ ಜಾಹಿರಾತನ್ನು ಮೇ 6ರಂದು ನೋಡಿದ್ದೆ. ಅದರಲ್ಲಿದ್ದ ವಾಟ್ಸ್ ಆ್ಯಪ್ ಸಂಖ್ಯೆಯನ್ನು ಸಂಪರ್ಕಿಸಿದಾಗ, ಮೂರು ಟೆಲಿಗ್ರಾಂ ಕೊಂಡಿಗಳನ್ನು ಕಳುಹಿಸಿದರು. ಹೋಟೆಲ್, ರೆಸ್ಟೋರೆಂಟ್ಗಳ ಆನ್ಲೈನ್ ಜಾಹೀರಾತುಗಳಿಗೆ ಲೈಕ್ ಮಾಡಿ 5 ಸ್ಟಾರ್ ರೇಟಿಂಗ್ ನೀಡಿದರೆ ಕಮಿಷನ್ ನೀಡುವುದಾಗಿ ಅದರಲ್ಲಿ ತಿಳಿಸಿದ್ದರು. ನಂತರ ಮೀನಾ ರೆಡ್ಡಿ ಎಂಬುವವರು ಸಂಪರ್ಕಿಸಿ ಬ್ಯಾಂಕ್ ಖಾತೆ ವಿವರ ಪಡೆದುಕೊಂಡರು. ಈ ಕೆಲಸಕ್ಕೆ ಆರಂಭದಲ್ಲಿ ನನಗೆ ₹ 120, ₹ 200 ... ಹೀಗೆ ಹಣ ಕಳುಹಿಸಿದ್ದರು’ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಆ ಬಳಿಕ ಟ್ರೇಡಿಂಗ್ ಖಾತೆಯ ಟಾಸ್ಕ್ ಪೂರೈಸುವ ಮೂಲಕ ಹೆಚ್ಚು ಹಣ ಗಳಿಸಬಹುದು ಎಂದು ಆಮಿಷವೊಡ್ಡಿದರು. ಅವರ ಸೂಚನೆ ಮೇರೆಗೆ ರಾಜೇಶ್ ಶರ್ಮ ಎಂಬುವರನ್ನು ಸಂಪರ್ಕಿಸಿದೆ. ಅವರ ಮೂಲಕ ಲಕ್ಕಿ ಸಿಂಗ್ ಹಾಗೂ ರವಿ ಪಾಟೇಲ್ ಪರಿಚಯವಾದರು. ಅವರು ನೀಡಿದ ಸೂಚನೆಯಂತೆ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹ 20.62 ಲಕ್ಷ ಹಣ ಪಾವತಿಸಿದ್ದೇನೆ. ನಾನು ಕಟ್ಟಿದ ಹಣವನ್ನೂ ಮರಳಿಸದೇ, ಕಮಿಷನ್ ಕೂಡಾ ನೀಡದೇ ವಂಚಿಸಿದ್ದಾರೆ ಎಂದು ಸಂತ್ರಸ್ತ ವ್ಯಕ್ತಿ ಆರೋಪಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.