ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಾಂಗ ದಾನದತ್ತ ಚಿತ್ತ ಹರಿಸಿ: ಬಿಷಪ್

ಯೆನೆಪೋಯ ನೆಫ್ರೋ- ಯುರಾಲಜಿ ಸಂಸ್ಥೆ ಉದ್ಘಾಟನೆ
Last Updated 1 ನವೆಂಬರ್ 2022, 5:58 IST
ಅಕ್ಷರ ಗಾತ್ರ

ಉಳ್ಳಾಲ: ನೊಂದವರ ಬೆನ್ನಿಗೆ ನಿಂತ ಯೆನೆಪೋಯ ಮಾದರಿ ಸಂಸ್ಥೆಯಾಗಿದೆ. ಪ್ರತಿಯೊಬ್ಬರು ಅಂಗಾಂಗ ದಾನದತ್ತ ಹೆಚ್ಚಿನ ಒಲವು ಹರಿಸಬೇಕು ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪೌಲ್ ಸಲ್ಡಾನ ಹೇಳಿದರು.

ದೇರಳಕಟ್ಟೆ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ನೆಫ್ರಾಲಜಿ, ಯುರಾಲಜಿ, ರೀನಲ್ ಟ್ರಾನ್ಸ್ ಪ್ಲಾಂಟ್ ಹಾಗೂ ರೊಬೋಟಿಕ್ ಸರ್ಜರಿ ವಿಭಾಗಗಳ ಆಶ್ರಯದಲ್ಲಿ ಜರುಗಿದ ಯೆನೆಪೋಯ ನೆಫ್ರೋ ಯುರಾಲಜಿ ಸಂಸ್ಥೆಯ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಗ್ರೀಕರು ಇಡೀ ವಿಶ್ವವನ್ನೇ ಒಂದು ಜೀವ ಎಂದು ನಂಬಿದವರು. ಕಷ್ಟ ಎದುರಾದವರಿಗೆ ಪ್ರತಿಯೊಬ್ಬರು ಸಹಕರಿಸಿದಾಗ ಜೀವ ಉಳಿಸುವುದೇ ಧರ್ಮ ಎಂದರು.

ಕೆ.ಎಂ ಸಿ ಮಣಿಪಾಲ ನೆಫ್ರಾಲಜಿ ವಿಭಾಗದ ಪ್ರೊ. ಡಾ. ರವೀಂದ್ರ ಪ್ರಭು ಮಾತನಾಡಿ, ‘ಕಿಡ್ನಿ ಸಮಸ್ಯೆಯಿಂದ ಮಾನಸಿಕವಾಗಿ ನೊಂದು ಹಲವರು ಸಾವನ್ನಪ್ಪಿದ್ದರೆ, ಔಷಧಿಗೂ ಮುಂದಾಗದೇ ಸಾವನ್ನಪ್ಪುವ ಸಂಖ್ಯೆಯೂ ಹೆಚ್ಚಿತ್ತು. ಈಗ ವೈದ್ಯಕೀಯ ತಂತ್ರಜ್ಞಾನ ಬದಲಾಗಿದೆ’ ಎಂದರು.

ಯೆನೆಪೋಯ ವಿ.ವಿ ಉಪಕುಲಪತಿ ಡಾ. ಎಂ. ವಿಜಯಕುಮಾರ್ ಮಾತನಾಡಿ, ಅಂಗಾಂಗ ದಾನದ ಕಾರ್ಯ ಮಾನವೀಯತೆ ಎತ್ತಿ ಹಿಡಿಯುತ್ತದೆ’ ಎಂದರು. ಕಿಡ್ನಿ ದಾನ ಮಾಡಿದ ಏಳು ಮಂದಿಯನ್ನು ಸನ್ಮಾನಿಸಲಾಯಿತು. ಯೇನೆಪೋಯ ಪರಿಗಣಿತ ವಿ.ವಿ.ದ ಸಹಕುಲಾಧಿಪತಿ ಫರ್ಹಾದ್‌ ಯೇನೆಪೋಯ, ಕುಲಸಚಿವ ಡಾ.ಗಂಗಾಧರ್‌ ಸೋಮಯಾಜಿ, ಡೀನ್‌ ಡಾ.ಎಂ.ಎಸ್‌ ಮೂಸಬ್ಬ, ವೈದ್ಯಕೀಯ ಅಧೀಕ್ಷಕ ಡಾ.ಪ್ರಕಾಶ್‌ ಆರ್.ಎಂ ಸಲ್ದಾನ್ಹ, ವೈದ್ಯ ಡಾ. ಅಶೋಕ್ ಪಂಡಿತ್, ಡಾ. ಸಂತೋಷ್ ಪೈ, ಡಾ. ಅಲ್ತಾಫ್ ಖಾನ್, ಡಾ. ಮುಜೀಬ್ ವುರ್‌ ರೆಹಮಾನ್, ಡಾ. ನಿಶ್ಚಿತ್ ಡಿಸೋಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT