ಮಂಗಳೂರು: ವಿದ್ಯಾರ್ಥಿಗಳಲ್ಲಿ ತಾರತಮ್ಯ ಮಾಡದೇ ಜ್ಞಾನದ ಧಾರೆ ಎರೆಯುವಲ್ಲಿ ವಿಶ್ವವಿದ್ಯಾಲಯಗಳ ಪಾತ್ರ ಮಹತ್ತರವಾಗಿದೆ ಎಂದು ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.

ಪಾಂಡೇಶ್ವರದ ಶ್ರೀನಿವಾಸ ವಿಶ್ವವಿದ್ಯಾಲಯದ ಸಿಟಿ ಕ್ಯಾಂಪಸ್ನಲ್ಲಿ ಮಂಗಳವಾರ ನಡೆದ 2ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

ವಿಶ್ವವಿದ್ಯಾಲಯಗಳ ಪರಿಕಲ್ಪನೆ ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಇದೆ. ಹಳೆಯ ಕಾಲದಲ್ಲಿ ನಳಂದ, ತಕ್ಷಶಿಲಾ ವಿಶ್ವವಿದ್ಯಾಲಯಗಳು ವಿಶ್ವವಿಖ್ಯಾತ ಅಧ್ಯಯನ ಕೇಂದ್ರಗಳಾಗಿದ್ದವು ಎಂದರು.

ಆನ್ಲೈನ್ ಮೂಲಕ ಸಮಾರಂಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ವಿದ್ಯಾರ್ಥಿಗಳ ಪಾಲಿಗೆ ಇದು ಅಪೂರ್ವ ಕ್ಷಣ. ಪದವೀಧರರು ತಮ್ಮ ಜ್ಞಾನವನ್ನು ಸಮಾಜದ ಉನ್ನತಿಗೆ ಸದ್ಬಳಕೆ ಮಾಡಬೇಕು ಎಂದು ಹೇಳಿದರು.

ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಸ್. ಐತಾಳ್ ಮಾತನಾಡಿ, ಕೋವಿಡ್ನಿಂದಾಗಿ ಶಿಕ್ಷಣ ಕ್ಷೇತ್ರವೂ ಸೇರಿದಂತೆ ಎಲ್ಲ ರಂಗಗಳಲ್ಲಿ ಬದಲಾವಣೆಗಳಾಗಿವೆ. ತರಗತಿಗಳ ಬದಲು ಆನ್ಲೈನ್ ಪಾಠಗಳು ಆರಂಭವಾಗಿವೆ. ಕೋವಿಡ್ ಸಾಂಕ್ರಾಮಿಕದ ಮುನ್ನೆ
ಚ್ಚರಿಕೆ ಕ್ರಮವಾಗಿ ಶ್ರೀನಿವಾಸ ವಿಶ್ವವಿದ್ಯಾಲಯವು ವರ್ಚುವಲ್ ಘಟಿಕೋತ್ಸವ ಏರ್ಪಡಿಸಿದೆ ಎಂದು ತಿಳಿಸಿದರು.

ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಎ.ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ಸಹ ಕುಲಾಧಿಪತಿ ಡಾ.ಎ.ಶ್ರೀನಿವಾಸ ರಾವ್, ಆಡಳಿತ ಮಂಡಳಿಯ ಟ್ರಸ್ಟಿಗಳಾದ ವಿಜಯಲಕ್ಷ್ಮಿ ಆರ್. ರಾವ್, ಪ್ರೊ.ಎ.ಮಿತ್ರಾ ಎಸ್. ರಾವ್, ಪದ್ಮಿನಿ ಕುಮಾರ್, ಕುಲಸಚಿವರಾದ ಡಾ. ಅನಿಲ್ ಕುಮಾರ್, ಡಾ. ಶ್ರೀನಿವಾಸ್ ಮಯ್ಯ, ಡಾ. ಅಜಯ್ ಕುಮಾರ್, ಆದಿತ್ಯ ಕುಮಾರ್ ಭಾಗವಹಿಸಿದ್ದರು.

ಈ ಘಟಿಕೋತ್ಸವದಲ್ಲಿ 232 ಪದವಿ ಹಾಗೂ 87 ಸ್ನಾತಕೋತ್ತರ ಪದವಿ, ಒಬ್ಬ ಸಂಶೋಧನಾ ವಿದ್ಯಾರ್ಥಿಗೆ ಪಿಎಚ್.ಡಿ ಪದವಿ, ಒಂದು ಡಿಲಿಟ್ ಪದವಿ, ಒಟ್ಟು 38 ರ್ಯಾಂಕ್ಗಳೊಂದಿಗೆ 11 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.