ಗುರುವಾರ , ಆಗಸ್ಟ್ 5, 2021
21 °C

ಪಾಸ್‌ ಅವಧಿ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಕಾಸರಗೋಡು ಜಿಲ್ಲೆಯಿಂದ ತಲಪಾಡಿ ಚೆಕ್‌ಪೋಸ್ಟ್‌ ಮೂಲಕ ನಿತ್ಯ ನಗರಕ್ಕೆ ಬಂದು, ಹೋಗಲು ಮಂಗಳೂರು ಉಪ ವಿಭಾಗಾಧಿಕಾರಿ ಕಚೇರಿಯಿಂದ ನೀಡಿರುವ ಅಂತರರಾಜ್ಯ ಪಾಸ್‌ನ ಅವಧಿಯನ್ನು ಜುಲೈ 11ರವರೆಗೆ ವಿಸ್ತರಿಸಲಾಗಿದೆ.

‘ಆರಂಭದಲ್ಲಿ ಜೂನ್‌ 30ರವರೆಗೂ ಪಾಸ್‌ ನೀಡಲಾಗಿತ್ತು. ನಂತರ ಜುಲೈ 4ರವರೆಗೆ ವಿಸ್ತರಿಸಲಾಗಿತ್ತು. ಈಗ ಪಾಸ್‌ ಅವಧಿಯನ್ನು ಜುಲೈ 11ರವರೆಗೆ ವಿಸ್ತರಿಸಲಾಗಿದೆ. ಪಾಸ್‌ ಹೊಂದಿದವರು ನವೀಕರಣಕ್ಕೆ ಮತ್ತೆ ಅರ್ಜಿ ಸಲ್ಲಿಸಬೇಕಿಲ್ಲ’ ಎಂದು ಉಪ ವಿಭಾಗಾಧಿಕಾರಿ ಮದನ್‌ ಮೋಹನ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.