ಭಾನುವಾರ, ನವೆಂಬರ್ 27, 2022
27 °C

‌‘ಕುಡ್ಲದ ಪಿಲಿಪರ್ಬ: ಪ್ರಶಸ್ತಿ ಗೆದ್ದ ‘ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ ‘ಕುಡ್ಲದ ಪಿಲಿಪರ್ಬ 2022’ ಭಾನುವಾರ ರಾತ್ರಿ ಸಂಪನ್ನವಾಯಿತು.ಹುಲಿವೇಷ ಕುಣಿತ ಸ್ಪರ್ಧಾ ಕೂಟದ ಮೊದಲ ಆವೃತ್ತಿಯಲ್ಲಿ ಪೊಳಲಿ ಟೈಗರ್ಸ್ ‘ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು’ ತಂಡ ಪ್ರಶಸ್ತಿ ಗೆದ್ದುಕೊಂಡಿತು. 

ಬೋಳೂರಿನ ನೇಶನಲ್‌ ಕಾಳಿಚರಣ್ ಫ್ರೆಂಡ್ಸ್ ತಂಡವು ಪ್ರಥಮ ರನ್ನರ್ ಅಪ್ ಪ್ರಶಸ್ತಿ ಪಡೆಯಿತು. ಬಾಬುಗುಡ್ಡೆಯ ‘ನಂದಿಗುಡ್ಡೆ ಫ್ರೆಂಡ್ಸ್ ಹುಲಿ‘ ಎರಡನೇ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿವೆ.

ಶಾಸಕ ವೇದವ್ಯಾಸ ಕಾಮತ್, ಪ್ರತಿಷ್ಠಾನದ ಅಧ್ಯಕ್ಷ ದಿವಾಕರ ಪಾಂಡೇಶ್ವರ, ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ತೀರ್ಪುಗಾರರಾಗಿ ಬಜಿಲಕೇರಿ ಕಮಲಾಕ್ಷ, ಕೆ.ಕೆ.ಪೇಜಾವರ, ವೇಂಕಟೇಶ್ ಭಟ್, ನವೀನ್ ಕುಮಾರ್ ಉಪಸ್ಥಿತರಿದ್ದರು. ಕದ್ರಿ ನವನೀತ್ ಶೆಟ್ಟಿ, ಮನೋಹರ್ ಪ್ರಸಾದ್ ವಿಶ್ಲೇಷಣಾಕಾರರಾಗಿದ್ದರು. ಸಂಘಟಕ ಮಂಗಲ್ಪಾಡಿ ನರೇಶ್ ಶೆಣೈ, ಉದಯ್ ಪೂಜಾರಿ ಬಳ್ಳಾಲ್ ಬಾಗ್, ಲಲಿತ್ ಮೆಂಡನ್, ಚೇತನ್ ಕಾಮತ್, ನರೇಶ್ ಪ್ರಭು, ಸೂರಜ್ ಕಾಮತ್ ಕೊಂಚಾಡಿ, ಕಿರಣ್ ಶೆಣೈ, ಮನೋಹರ್ ಶೆಟ್ಟಿ, ಜಗದೀಶ್ ಕದ್ರಿ, ಶಾನು ಕೋಡಿಕೆರೆ, ವಿಜಯ ಕುಮಾರ್ ಶೆಟ್ಟಿ ಹಾಗೂ ಪಾಲಿಕೆ ಸದಸ್ಯರು ಇದ್ದರು. ಮಧುರಾಜ್, ಸೌಮ್ಯ ಕೋಟ್ಯಾನ್, ಶರ್ಮಿಳಾ ಅಮೀನ್, ಅಭಿಷೇಕ್ ಶೆಟ್ಟಿ, ಮಧು ಮೈಲಂಕೋಡಿ ನಿರೂಪಿಸಿದರು.

ಪಿಲಿ ಪರ್ಬ–ವಿಶೇಷ ಪ್ರಶಸ್ತಿಗಳು

ಪರ್ಬದ ಪಿಲಿ ಪ್ರಶಸ್ತಿ: ತುಳುವೆರ್ ಕುಡ್ಲ ಶ್ರೀರಾಮ ಕ್ರಿಕೆಟರ್ಸ್, ತಾಸೆ: ಕೊಡಿಯಾಲ್ ಬೈಲ್ ಫ್ರೆಂಡ್ಸ್, ಮರಿಪಿಲಿ: ಮುಳಿಹಿತ್ಲು ಫ್ರೆಂಡ್ಸ್, ಕರಿ ಪಿಲಿ: ಕೋಡಿಕಲ್ ವಿಶಾಲ್ ಟೈಗರ್ಸ್, ಧರಣಿ ಮಂಡಲ ಪ್ರಶಸ್ತಿ: ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು, ಪೊಳಲಿ ಟೈಗರ್ಸ್,: ವಿಶೇಷ ಬಣ್ಣಗಾರಿಕೆ: ಕಾಳಿಚರಣ್ ಫ್ರೆಂಡ್ಸ್ ನೇಶನಲ್ ಬೋಳೂರು, ಮುಡಿಯಕ್ಕಿ ಪ್ರಶಸ್ತಿ: ನಂದಿಗುಡ್ಡೆ ಫ್ರೆಂಡ್ಸ್ ಹುಲಿ, ಬಾಬುಗುಡ್ಡೆ ಶಿಸ್ತಿನ ತಂಡ ಪ್ರಶಸ್ತಿ: ಜೈ ಶಾರದಾಂಬ, ಪೇಜಾವರ ಪೋರ್ಕೋಡಿ,

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.