ಗುರುವಾರ , ಸೆಪ್ಟೆಂಬರ್ 23, 2021
23 °C

ಮಂಗಳೂರು: ಕಾರಿನ ಟೈರ್ ಬದಲಿಸಲು ನೆರವಾದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮಹಿಳೆಯೊಬ್ಬರು ಮಗುವಿನೊಂದಿಗೆ ಕಾರಿನಲ್ಲಿ ಹೋಗುತ್ತಿರುವಾಗ ಟೈರ್ ಪಂಕ್ಚರ್ ಆಗಿ ಪರದಾಡುತ್ತಿರುವುದನ್ನು ಗಮನಿಸಿದ ನಾಗುರಿ ಸಂಚಾರಿ ಠಾಣಾ ಪೊಲೀಸರು ಟೈರ್ ಬದಲಿಸಲು ನೆರವಾಗಿ, ಮಾನವೀಯತೆ ಮೆರೆದರು.

ಕುಂದಾಪುರದ ಮಹಿಳೆ ನಾಗುರಿ ಕಡೆಯಿಂದ ಮಂಗಳೂರು ನಗರದ ಕಡೆಗೆ ಬರುತ್ತಿರುವಾಗ ಪಂಪ್‌ವೆಲ್‌ ಬಳಿ ಟೈರ್ ಪಂಕ್ಚರ್ ಆಗಿತ್ತು. ಮಹಿಳೆ ಅಸಹಾಯಕಳಾಗಿರುವುದನ್ನು ಗಮನಿಸಿದ ಹೈವೆ ಪೆಟ್ರೋಲಿಂಗ್‌ನಲ್ಲಿದ್ದ ಪೊಲೀಸರು, ಕಾರಿನ ಬಳಿ ಬಂದು ಟೈರ್ ಬದಲಿಸಿಕೊಟ್ಟರು. ಸಂಚಾರಿ ಠಾಣೆ ಎಎಸ್ಐ ಲಸ್ರಾದೊ, ಸಿಬ್ಬಂದಿ ಮಹೇಶ್ ಹಾಗೂ ಗೃಹ ರಕ್ಷಕ ದಳದ ಆಸಿಫ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು