ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಇಸ್ಪೀಟ್‌ ಅಡ್ಡೆ ಮೇಲೆ ದಾಳಿ

Last Updated 7 ಜೂನ್ 2020, 16:18 IST
ಅಕ್ಷರ ಗಾತ್ರ

ಮಂಗಳೂರು: ನಗರದ ಆನೆಗುಂಡಿ 2ನೇ ತಿರುವಿನ ಹೋಮ್ ಗೆಸ್ಟ್ ಹೌಸ್‌ನಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಪ್ರಮುಖ ಆರೋಪಿ ಪೋರ್ತ್‌ಮೈಲ್‌ನ ಚೇತನ್ ಕುಮಾರ್ ಸೇರಿದಂತೆ 14 ಮಂದಿಯನ್ನು ಬಂಧಿಸಿದ್ದಾರೆ.

ಕೂಳೂರು ಚೇತನ್‌ ಕುಮಾರ್, ಉಡುಪಿಯ ಕಲ್ಸಂಗದ ನಿಖಿಲ್, ಬರ್ಕೆಯ ಚೇತನ್, ಅಶೋಕನಗರದ ಧೀರಜ್, ದಂಬೇಲ್‌ನ ಸಚಿನ್, ಚೊಕ್ಕಬೆಟ್ಟುವಿನ ಸುರೇಂದ್ರ ಭಂಡಾರಿ, ಕಾನಕತ್ಲ ಅನ್ವರ್, ಬೆಂಗರೆ ಝುಬೈರ್, ಕಾವೂರಿನ ನಾಗೇಶ್ ಶ್ರೀಯಾನ್, ಕುಳಾಯಿ ಭರತೇಶ್ ಶ್ರೀಯಾನ್, ಜೋಕಟ್ಟೆಯ ಇಮ್ರಾನ್, ಕೊಣಾಜೆಯ ಅನ್ವರ್, ಬಂಗ್ರ ಕೂಳೂರಿನ ಹೇಮಂತ್, ಕುಂಜತ್ತಬೈಲ್‌ನ ಸತೀಶ್ ಪೂಜಾರಿ ಬಂಧಿತರು.

ಆಟಕ್ಕೆ ಬಳಸಿದ ₹1,75,200, 18 ಮೊಬೈಲ್, ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಪಡೆದ ಸಿಸಿಬಿ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಮತ್ತು ಸಬ್ ಇನ್‌ಸ್ಪೆಕ್ಟರ್‌ ಕಬ್ಬಾಳ್ ರಾಜ್ ಅವರ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳು ಹಾಗೂ ವಶಕ್ಕೆ ಪಡೆಯಲಾದ ವಸ್ತುಗಳನ್ನು ಉರ್ವ ಠಾಣೆಗೆ ಹಸ್ತಾಂತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT