ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರ ಯಾತ್ರೆ: ಕುಮಾರಪಾದಕ್ಕೆ ಪೂಜೆ

Published 4 ಜನವರಿ 2024, 2:32 IST
Last Updated 4 ಜನವರಿ 2024, 2:32 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಪವಿತ್ರ ಕುಮಾರಪರ್ವತದ ತುತ್ತ ತುದಿಯಲ್ಲಿರುವ ಕುಮಾರನ ಪಾದಕ್ಕೆ ಮತ್ತು ಸಮೀಪದಲ್ಲಿರುವ ವಾಸುಕಿಗೆ ಕುಕ್ಕೆಸುಬ್ರಹ್ಮಣ್ಯ ದೇವಳದ ಪ್ರಧಾನ ಅರ್ಚಕ ಸೀತಾರಾಮ ಯಡಪಡಿತ್ತಾಯ ಅವರು ಮಂಗಳವಾರ ಪೂಜೆ ನೆರವೇರಿಸಿದರು.

ಸಮುದ್ರಮಟ್ಟದಿಂದ ಸುಮಾರು 4000 ಅಡಿ ಎತ್ತರವಿರುವ ಕುಮಾರ ಪರ್ವತದ ತುತ್ತ ತುದಿಯಲ್ಲಿರುವ ಕುಮಾರನ ಪಾದಗಳಿಗೆ ಮಧ್ಯಾಹ್ನ 12ಗಂಟೆ ವೇಳೆಗೆ ಪೂಜೆ ಸಲ್ಲಿಸಲಾಯಿತು. ಪಾದದ ಬಳಿ ಇರುವ ವಾಸುಕಿಗೆ ಪೂಜೆ ನೆರವೇರಿಸಿದರು. ಬಳಿಕ ಪ್ರಸಾದ ವಿತರಣೆ ನೆರವೇರಿತು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಲೋಕೇಶ್ ಮುಂಡೋಕಜೆ, ಶೋಭಾ ಗಿರಿಧರ್, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಮಾಜಿ ಸದಸ್ಯ ಶಿವರಾಮ ರೈ, ಅನುಗ್ರಹ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಗಣೇಶ್ ಪ್ರಸಾದ್ ಎನ್., ಬಸವನಮೂಲೆ ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂಧ, ದೇವಳದ ಸಿಬ್ಬಂದಿ ಬಾಲಕೃಷ್ಣ ಆರ್., ಮಹೇಶ್‌ಕುಮಾರ್‌ ಎಸ್., ಪುರುಷೋತ್ತಮ, ಪೂರ್ಣಿಮಾ ಮಹೇಶ್ಚಂದ್ರ, ಸುಜಾತಾ, ಪವಿತ್ರಾ, ಭಾಗ್ಯಶ್ರೀ, ಸ್ಪರ್ಶಾ ಭಾಗವಹಿಸಿದ್ದರು.

ಕೆಲವು ಭಕ್ತರು ಸೋಮವಾರ ಯಾತ್ರೆ ಆರಂಭಿಸಿ ಗಿರಿಗದ್ದೆ ಮೂಲಕ ಮಂಗಳವಾರ ಕುಮಾರಪರ್ವತ ತಲುಪಿದ್ದರು. ದೇವಳದ ಆಡಳಿತ ಮಂಡಳಿ, ದೇವಳದ ಸಿಬ್ಬಂದಿ ಭಕ್ತರು ಮಂಗಳವಾರ ಮುಂಜಾನೆ ಕುಕ್ಕೆ ದೇವಳದಿಂದ ವಾಹನಗಳಲ್ಲಿ ಬಿಸಿಲೆ, ಶಾಂತಳ್ಳಿ ಮೂಲಕ ಕುಮಾರಪರ್ವತ ಯಾತ್ರೆಗೆ ತೆರಳಿದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT