ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಳಂಭಟ್‌ ಹಾಲ್‌ನಲ್ಲಿ ಸೆ.10ರಿಂದ ‘ಪ್ರಕೃತಿ ತಿಂಡಿ ಹಬ್ಬ‘

Last Updated 7 ಸೆಪ್ಟೆಂಬರ್ 2022, 8:50 IST
ಅಕ್ಷರ ಗಾತ್ರ

ಮಂಗಳೂರು: ‘ಪ್ರಕೃತಿ ಫುಡ್ಸ್’ ವತಿಯಿಂದ ಇದೇ 10 ಮತ್ತು 11 ರಂದು ಶರವು ದೇವಸ್ಥಾನದ ಬಳಿಯ ಭಾಳಂಭಟ್‌ ಸಭಾಭವನದಲ್ಲಿ ‘ಪ್ರಕೃತಿ ಫುಡ್ಸ್ ತಿಂಡಿ ಹಬ್ಬ 2022’ ಏರ್ಪಡಿಸಲಾಗಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ವಿಷಯ ತಿಳಿಸಿದ ಸಾವಯವ ಕೃಷಿಕ ಲೈಂಕಜೆ ರಾಮಚಂದ್ರ, ‘ತಿಂಡಿ ತಿನಿಸುಗಳ ಮಳಿಗೆಗಳು ಸೇರಿದಂತೆ ಸುಮಾರು 60 ಮಳಿಗೆಗಳು ಇರಲಿವೆ. ಜಿಲ್ಲೆಯ ಸ್ವಾವಲಂಬಿ ಗೃಹೋದ್ಯಮಿಗಳನ್ನು ಉತ್ತೇಜಿಸಲು ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಗ್ರಾಹಕರ ಆಸಕ್ತಿಗೆ ತಕ್ಕಂತೆ ತಿಂಡಿಗಳು, ಸಿಹಿ ತಿಂಡಿಗಳನ್ನು ತಯಾರಿಸಿ ಕೊಡುವ ವ್ಯವಸ್ಥೆಯೂ ಇದೆ. ತರಕಾರಿ ಗಿಡಗಳು ಬೀಜಗಳು, ಹೂ ಹಾಗೂ ತರಕಾರಿ ಗಿಡಗಳು ಲಭ್ಯ’ ಎಂದರು.

‘ಇದೇ 10ರಂದು ಬೆಳಿಗ್ಗೆ 9.45ಕ್ಕೆ ದೈಜಿವರ್ಲ್ಡ್‌ ವಾಹಿನಿಯ ಮಾಲೀಕ ಮತ್ತು ನಿರ್ದೇಶಕರಾದ ವಾಲ್ಟರ್ ನಂದಳಿಕೆ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ. ಪ್ರವೀಣ್ ತಿಂಡಿಹಬ್ಬವನ್ನು ಉದ್ಘಾಟಿಸುವರು’ ಎಂದರು.

ಪ್ರಕೃತಿ ಫುಡ್ಸ್‌ನ ಮಾಲೀಕಪ್ರಕಾಶ್ ಪ್ರಭು, ‘ಸ್ಥಳದಲ್ಲೇ ತಿಂಡಿ ತಯಾರಿಸುವ 20 ಮಳಿಗೆಗಳು ಇರಲಿವೆ. ದಕ್ಷಿಣ ಕನ್ನಡ ಜಿಲ್ಲೆಯ ಮಳಿಗೆಗಳ ಜೊತೆಗೆ ವಿಜಯಪುರ, ಗೋಕಾಕ್‌, ಧಾರವಾಡ ಹಾಗೂ ಬೆಳಗಾವಿಯ ಮಳಿಗೆಗಳೂ ಇರಲಿವೆ. ಬೆಳಗಾವಿಯ ಕುಂದ, ಧಾರವಾಡದ ಪೇಡ, ಗೋಕಾಕ್ ಕರದಂಟನ್ನು ಸವಿಯಬಹುದು. ಸಾಂಪ್ರದಾಯಿಕ ವಿಧಾನದಲ್ಲಿ ತಯಾರಿಸುವ ಉಪ್ಪಿನಕಾಯಿ ಮತ್ತು ಹಲಸಿನ ಹಪ್ಪಳವೂ ಸೇರಿದಂತೆ ವಿವಿಧ ಬಗೆಯ ಹಪ್ಪಳಗಳು, ಹಣ್ಣಿನ ರಸಗಳು, ಚೆನ್ನಪಟ್ಟಣ ಗೊಂಬೆ, ಗೋವಿನ ಉತ್ಪನ್ನಗಳು, ಎಳೆ ತೆಂಗಿನಕಾಯಿಯ ಚಿಪ್ಸ್, ಖಾದಿ ಬಟ್ಟೆ ಮಳಿಗೆಗಳು ಇರಲಿವೆ. ಬಿದಿರಕ್ಕಿ ಪಾಯಸ, ರಾಗಿ ಮುದ್ದೆ, ಜೋಳದ ರೊಟ್ಟಿ, ಪತ್ರೊಡೆ, ಬಿದಿರಕ್ಕಿ ಬೆಣ್ಣೆದೋಸೆ, ಪಲಾವ್, ಲಡ್ಡು, ಸ್ಥಳದಲ್ಲೇ ತಯಾರಿಸುವ ಹಲಸಿನ ಹೋಳಿಗೆ, ಹಲಸಿನ ಗಟ್ಟಿ, ಹಲಸಿನ ಪಾಯಸ, ಸಾವಯವ ಧಾನ್ಯಗಳ ತಿನಿಸುಗಳು ಪ್ರಮುಖ ಆಕರ್ಷಣೆಗಳು’ ಎಂದರು.

ಕಿರುತೆರೆ ಕಲಾವಿದಪ್ರಶಾಂತ್ ಸಿ.ಕೆ, ‘ಯಾವುದೇ ರಾಸಾಯನಿಕ ಸಂರಕ್ಷಕಗಳನ್ನು ಬಳಸದೇ ಸಾವಯವ ವಿಧಾನದಲ್ಲಿ ತಿಂಡಿ–ತಿನಿಸು ತಯಾರಿ ಪ್ರಕೃತಿ ಫುಡ್‌ ವಿಶೇಷ’ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಶ್ವಿನಿ ಪ್ರಭು ಹಾಗೂ ಸಾವಯವ ಕೃಷಿಕರಾದ ಮೈತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT