ಮಂಗಳೂರು: ‘ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಘಟಕಗಳನ್ನು 33 ವಿಶೇಷ ಪೊಲೀಸ್ ಠಾಣೆಗಳನ್ನಾಗಿ ಪರಿವರ್ತಿಸುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ, ಈ ಠಾಣೆಗಳಿಗೆ ಅಗತ್ಯ ಸಿಬ್ಬಂದಿ ಹಾಗೂ ಮೂಲಸೌಕರ್ಯವನ್ನು ಕಲ್ಪಿಸಿದರೆ ಮಾತ್ರ ಅವುಗಳ ಸ್ಥಾಪನೆಯ ಆಶಯ ಈಡೇರಲಿದೆ’ ಎಂದು ಪರಿಶಿಷ್ಟ ಜಾತಿ ಗಳು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ಜನರ ವಿರುದ್ಧದ ದೌರ್ಜನ್ಯ ಪ್ರಕರಣಗಳ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸುವ, ಆರೋಪಿಗಳ ಬಂಧಿಸುವ, ಆರೋಪ ಪಟ್ಟಿ ಸಲ್ಲಿಸುವ ಅಧಿಕಾರವನ್ನು ಈ ಠಾಣೆಗಳಿಗೆ ನೀಡಲಾಗುತ್ತಿದೆ. ಸಕಾಲದಲ್ಲಿ ತನಿಖೆ ನಡೆಸಿ, ನ್ಯಾಯಾಲಯಗಳಿಗೆ ಎರಡು ತಿಂಗಳ ಒಳಗೆ ಆರೋಪ ಪಟ್ಟಿ ಸಲ್ಲಿಸಿ, ಅಪರಾಧಿಗಳಿಗೆ ಶಿಕ್ಷೆಆಗುವಂತೆ ನೋಡಿಕೊಳ್ಳುವುದು ಈ ಠಾಣೆಗಳ ಹೊಣೆ. ಪರಿಶಿಷ್ಟರ ಮೇಲಿನ ದೌರ್ಜನ್ಯಗಳಿಗೆ ಸಂಬಂಧಿಸಿ ಸ್ಥಳೀಯ ಠಾಣೆಗಳಲ್ಲಿ ದಾಖಲಾಗುವ ದೂರುಗಳನ್ನೂ ಡಿಸಿಆರ್ಇ ಠಾಣೆಗೆ ವರ್ಗಾಯಿಸಬೇಕಾಗುತ್ತದೆ. ಡಿಸಿಆರ್ಇ ಠಾಣೆಗೆ ಒಬ್ಬ ಡಿವೈಎಸ್ಪಿ (ಠಾಣಾಧಿಕಾರಿ), ಒಬ್ಬ ಇನ್ಸ್ಪೆಕ್ಟರ್-1, ಒಬ್ಬ ಸಬ್ ಇನ್ಸ್ಪೆಕ್ಟರ್, ಮೂವರು ಹೆಡ್ ಕಾನ್ಸ್ಟೆಬಲ್ ಹಾಗೂ 7 ಕಾನ್ಸ್ಟೇಬಲ್ಗಳನ್ನು ನೇಮಿಸಲಾಗುತ್ತದೆ ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕರು 2025ರ ಜ. 21ರ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಇಡೀ ಜಿಲ್ಲೆಯ ವ್ಯಾಪ್ತಿಯ ಪ್ರಕರಣಗಳ ತನಿಖೆಯನ್ನು ಪರಿಣಾಮಕಾರಿಯಾಗಿ ನಡೆಸಲು ಇಷ್ಟು ಕಡಿಮೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಲದು’ ಎಂದರು.

‘ಪರಿಶಿಷ್ಟ ಸಮುದಾಯದವರ ಮೇಲಿನ ದೌರ್ಜನ್ಯ ಸಂಬಂಧ ಬಂಟ್ವಾಳ ಮತ್ತು ಪುತ್ತೂರು ಉಪವಿಭಾಗಗಳಲ್ಲಿ 2020ರಿಂದ ಈ ವರೆಗೆ 213 ಪ್ರಕರಣ ದಾಖಲಾಗಿದ್ದು, 141 ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿದೆ. 112 ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. 55 ಪ್ರಕರಣಗಳಲ್ಲಿ ಬಿ–ವರದಿ ಸಲ್ಲಿಸಲಾಗಿದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ 127 ಪ್ರಕರಣಗಳು ದಾಖಲಾಗಿದ್ದು, 91ರಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿದೆ. 24 ಪ್ರಕರಣಗಳಲ್ಲಿ ಬಿ ವರದಿ ಸಲ್ಲಿಕೆಯಾಗಿದೆ. 40 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗಿದ್ದು, ಎರಡರಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗಿದೆ’ ಎಂದು ಅವರು ವಿವರ ನೀಡಿದರು.

‘ದಕ್ಷಿಣ ಕನ್ನಡ ಜಿಲ್ಲೆಯ 26 ಠಾಣೆಗಳು ಹಾಗೂ ಕಮಿಷನರೇಟ್ ವ್ಯಾಪ್ತಿಯ 16 ಠಾಣೆಗಳಲ್ಲಿ ಪರಿಶಿಷ್ಟರ ದೌರ್ಜನ್ಯ ಪ್ರಕರಣಗಳನ್ನು ಇನ್ನು ಡಿಸಿಆರ್ಇ ಠಾಣೆಗೆ ವರ್ಗಾವಣೆ ಆಗಲಿವೆ. ಈ ಠಾಣೆಗೆ ಒಬ್ಬ ಡಿವೈಎಸ್ಪಿ ಇಬ್ಬರು ಇನ್ಸ್ಪೆಕ್ಟರ್, ನಾಲ್ವರು ಎಸ್ಐಗಳು, ಕನಿಷ್ಠ ಇಬ್ಬರು ಮಹಿಳಾ ಹೆಡ್ ಕಾನ್ಸ್ಟೆಬಲ್ ಸಹಿತ ಆರು ಹೆಡ್ ಕಾನ್ಸ್ಟೆಬಲ್ ಹಾಗೂ ಐವರು ಮಹಿಳಾ ಕಾನ್ಸ್ಟೆಬಲ್ಗಳು ಸೇರಿದಂತೆ 20 ಕಾನ್ಸ್ಟೆಬಲ್ಗಳನ್ನು ನೇಮಿಸುವ ಅಗತ್ಯವಿದೆ. ವಿಶಾಲ ಕಟ್ಟಡ, ನಾಲ್ಕು ವಾಹನಗಳನ್ನು ಒದಗಿಸಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲಾ ದೌರ್ಜನ್ಯ ತಡೆ ಜಾಗ್ರತೆ ಮತ್ತು ಉಸ್ತುವಾರಿ ಸಮಿತಿಗೆ ಪರಿಶಿಷ್ಟರ ಕುರಿತು ಕಾಳಜಿ ಇರುವವರನ್ನೇ ಸದಸ್ಯರನ್ನಾಗಿ ನೇಮಿಸಬೇಕು’ ಎಂದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಮುಖರಾದ ಲಕ್ಷಣ್ ಕಾಂಚನ್, ರಾಜಾ ಚೆಂಡ್ತಿಮಾರ್, ಕಾಂತಪ್ಪ ಅಲಂಗಾರು, ಜನಾರ್ದನ ಬೋಳಂತೂರು, ದಯಾನಂದ, ಸಂತೋಷ್ ಹಾಗೂ ಸುಂದರ್ ಎನ್.ಕೆ ಭಾಗವಹಿಸಿದ್ದರು.

ಡಿಸಿಆರ್ಇ ಠಾಣೆಯಲ್ಲಿ ದಾಖಲಾಗುವ ಪ್ರಕರಣಗಳು

ಪರಿಶಿಷ್ಟ ಸಮುದಾಯದ ದೌರ್ಜನ್ಯ ನಕಲಿ ಜಾತಿ ಪ್ರಮಾಣಪತ್ರ ಪಡೆಯುವಿಕೆ ಸರ್ಕಾರಿ ಸೇವೆಗಳ ನೇಮಕಾತಿ ಮತ್ತು ಬಡ್ತಿ ಪರಿಶಿಷ್ಟ ವಿದ್ಯಾರ್ಥಿಗಳ ಶೈಕ್ಷಣಿಕ ಮೀಸಲಾತಿ ಉಲ್ಲಂಘನೆ ಪರಿಶಿಷ್ಟರಿಗೆ ಮೀಸಲಾದ ಅನುದಾನಗಳ ದುರ್ಬಳಕೆ ಪರಿಶಿಷ್ಟರ ಜಮೀನುಗಳ ಅಕ್ರಮ ಮಾರಾಟ ಅಥವಾ ಅತಿಕ್ರಮಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.