ಭಾನುವಾರ, ಸೆಪ್ಟೆಂಬರ್ 25, 2022
28 °C

ರೇಚಲ್ ರೋಸ್ ರಂಗಪ್ರವೇಶ ಸೆ.10ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಪಿ.ಯು. ವಿದ್ಯಾರ್ಥಿನಿ ರೇಚಲ್ ರೋಸ್ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ನಗರದ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಇದೇ 10 ರಂದು ಸಂಜೆ 4 ಗಂಟೆಗೆ ನಡೆಯಲಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕದ್ರಿ ನೃತ್ಯ ವಿದ್ಯಾಲಯದ ವಿದ್ವಾನ್ ಯು.ಕೆ. ಪ್ರವೀಣ್, ‘ರೇಚಲ್ ರೋಸ್ ಅವರು ನಮ್ಮಲ್ಲಿ 8 ವರ್ಷಗಳಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಅವರು ರಂಗಪ್ರವೇಶದ ಅಂಗವಾಗಿ 3 ಗಂಟೆಗಳ ಕಾಲ ಪಂದನಲ್ಲೂರು ಪದ್ಧತಿಯಲ್ಲಿ ಭರತನಾಟ್ಯ ಪ್ರಸ್ತುತಪಡಿಸಲಿದ್ದಾರೆ’ ಎಂದರು.

‘ನಟುವಾಂಗದಲ್ಲಿ ಗುರು ವಿದ್ವಾನ್ ಯು.ಕೆ.ಪ್ರವೀಣ್, ಗಾಯನದಲ್ಲಿ ವಿದುಷಿ ಉಷಾ ಪ್ರವೀಣ್, ಮೃದಂಗದಲ್ಲಿ ವಿದ್ವಾನ್ ಗೀತೇಶ್ ಎ., ಜಿ.ನೀಲೇಶ್ವರಂ, ಪಿಟೀಲಿನಲ್ಲಿ ವಿದ್ವಾನ್ ಶ್ರೀಧರ್ ಆಚಾರ್ ಪಾಡಿಗಾರ್ ಹಾಗೂ ಕೊಳಲಿನಲ್ಲಿ ವಿದ್ವಾನ್ ರಾಜಗೋಪಾಲ್ ವಿ.ಪಿ. ಸಹಕರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ ಕೋಟ್ಯಾನ್‌, ಸೇಂಟ್‌ ಅಲೊಷಿಯಸ್‌ ಕಾಲೇಜಿನ ಪ್ರಾಮಶುಪಾಲ ಫಾ.ಕ್ಲಿಫರ್ಡ್‌ ಸಿಕ್ವೇರಾ, ಸೇಂಟ್‌ ಥೆರೆಸಾ ಶಾಲೆಯ ಪ್ರಾಂಶುಪಾಲರಾದ ಭಗಿನಿ ಲೂರ್ದ್ಸ್‌ ಪ್ರಿನ್ಸ್‌ ಮೇರಿ ಬಿಎಸ್‌., ಬೆಂಗಳೂರಿನ ನಿರ್ಮಲ ನೃತ್ಯ ನಿಕೇತನದ ನಿರ್ದೇಶಕರಾದ ವಿದುಷಿ ನಿರ್ಮಲಾ ಮಂಜುನಾಥ, ನಗರದ ಸೇಂಟ್‌ ಅಲ್ಫೋನ್ಸಾ ಚರ್ಚ್‌ನ ಧರ್ಮಗುರು ರೆ.ಫಾ. ಮಣಿ ವೆಳ್ತೆಡ್ತ ಪರಂಬಿಲ್‌  ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ರೇಚಲ್ ರೋಸ್ ಅವರ ತಂದೆ ಸಿಬಿ ಥಾಮಸ್, ಕದ್ರಿ ನೃತ್ಯಾಲಯದ ವಿದುಷಿ ಉಷಾ ಪ್ರವೀಣ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.