ಬುಧವಾರ, ಸೆಪ್ಟೆಂಬರ್ 30, 2020
20 °C

ಮೂಲ್ಕಿ: ಗಾಳಿ ಮಳೆಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಲ್ಕಿ: ಭಾರಿ ಗಾಳಿ ಸಹಿತ ಸುರಿದ ಮಳೆಗೆ ಸೋಮವಾರ ಇಲ್ಲಿನ ಹೋಬಳಿಯಲ್ಲಿನ ಕೆ.ಎಸ್.ರಾವ್ ನಗರ ಹಾಗೂ ಸಸಿಹಿತ್ಲುವಿನಲ್ಲಿ ಹಾನಿಗಳಾಗಿವೆ.

ಕೆ.ಎಸ್. ರಾವ್ ನಗರದ ಕೆಇಬಿ ರಸ್ತೆಯ ಸುಲೋಚನ ನಾಯರ್ ಎಂಬವರಿಗೆ ಸೇರಿದ ಮನೆಯ ಮೇಲ್ಚಾವಣಿ ಸಂಪೂರ್ಣ ಕುಸಿದುಬಿದ್ದಿದೆ. ಸುಲೋಚನಾ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಮನೆಯೊಳಗಿದ್ದ ಸೂರಜ್, ಜಯಲಕ್ಷ್ಮಿ, ರಕ್ಷಿತ್, ದೇವಿಕಾ ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಮೂಲ್ಕಿ ವಿಶೇಷ ತಹಶೀಲ್ದಾರ್ ಮಾಣಿಕ್ಯ ಎನ್. ಕಂದಾಯ ಅಧಿಕಾರಿಗಳು ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ.

ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಕೆರೆಯ ಹತ್ತಿರದಲ್ಲಿ ತೆಂಗಿನ ಮರ ಬಿದ್ದು ಮೂರು ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಗೋಪಾಲ ಪಾತ್ರಿ ಹಾಗೂ ನಾರಾಯಣ ಕರ್ಕೇರ ಎಂಬವರು ತಕ್ಷಣವೇ ಮೆಸ್ಕಾಂಗೆ ದೂರು ನೀಡಿದ್ದು, ಸಂಭವನೀಯ ಅಪಾಯ ತಪ್ಪಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು