ಸೋಮವಾರ, ಮೇ 23, 2022
24 °C

ಬಾವಿಗೆ ಬಿದ್ದ ಬೆಕ್ಕು ರಕ್ಷಿಸಿದ ರಜನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಇಲ್ಲಿನ ಬಳ್ಳಾಲ್‌ಬಾಗ್ ನಿವಾಸಿ ರಜನಿ ಶೆಟ್ಟಿ ಅವರು 30 ಅಡಿ ಆಳದ ಬಾವಿಗೆ ಇಳಿದು, ಜೀವದ ಹಂಗನ್ನು ತೊರೆದು ಬೆಕ್ಕನ್ನು ರಕ್ಷಿಸಿದ್ದಾರೆ.

ನಗರದ ದೇರೇಬೈಲ್‌ ಕೊಂಚಾಡಿಯಲ್ಲಿ 30 ಅಡಿ ಆಳದ ಹಳೆಯ ಬಾವಿ ಬಹುತೇಕ ಕುಸಿದು ಗುಹೆಯಂತಾಗಿದ್ದು, ಈ ಬಾವಿಗೆ ಈಚೆಗೆ ಬೆಕ್ಕೊಂದು ಬಿದ್ದು ಬಾವಿಯ ಮಧ್ಯದಲ್ಲಿ ಕುಸಿದು ಉಂಟಾದ ತಡೆಯಲ್ಲಿ ಸಿಲುಕಿ ಹಾಕಿಕೊಂಡಿತ್ತು. ಒಂದು ದಿನವಿಡೀ ಆಹಾರವಿಲ್ಲದೆ ಬಾವಿಯಲ್ಲೇ ಉಳಿದಿತ್ತು.

ಬೆಕ್ಕಿನ ರಕ್ಷಣೆ ಮಾಡಲು ಯಾರಿಂದಲೂ ಸಾಧ್ಯವಾಗದಿದ್ದಾಗ ರಜನಿ ಶೆಟ್ಟಿ ಅವರನ್ನು ಸ್ಥಳೀಯರು ಸಂಪರ್ಕಿಸಿದ್ದರು. ಪ್ರಾಣಿ ಪ್ರೇಮಿಯಾದ ರಜನಿ ಶೆಟ್ಟಿ ಅವರು ಸ್ಥಳೀಯರ ಸಹಕಾರದಿಂದ ಹಗ್ಗದ ಸಹಾಯದೊಂದಿಗೆ ಬಾವಿಗೆ ಇಳಿದು ಬೆಕ್ಕನ್ನು ರಕ್ಷಣೆ ಮಾಡಿದ್ದಾರೆ. ಹಿಂದೆಯೂ ಇವರು ಬಾವಿಗೆ ಬಿದ್ದಿದ್ದ ನಾಯಿಯೊಂದನ್ನು ರಕ್ಷಿಸಿದ್ದ ವಿಡಿಯೊ ವೈರಲ್‌ ಆಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು