ಮೂಡುಬಿದಿರೆ: ಶ್ರೀರಾಮ ನವಮಿ ಅಂಗವಾಗಿ ಜವನೆರ್ ಬೆದ್ರ ಫೌಂಡೇಶನ್ ಹಾಗೂ ಜವನೆರ್ ಬೆದ್ರ ಭಕುತಿ ಭಜನಾ ವೃಂದದ ಸಹಯೋಗದಲ್ಲಿ ಭನುವಾರ ರಾತ್ರಿ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀರಾಮ ನಾಮ ನಗರ ಸಂಕೀರ್ತನೆ ನಡೆಯಿತು.

ಗೋಪಾಕೃಷ್ಣ ದೇವಸ್ಥಾನದ ಮೊಕ್ತೇಸರ ಗುರುಪ್ರಸಾದ್ ಹೊಳ್ಳ ಸಂಕೀರ್ತನೆಗೆ ಚಾಲನೆ ನೀಡಿದರು.

ದೇವಸ್ಥಾನದಿಂದ ಹೊರಟ ಭಜನೆ ಸಂಕೀರ್ತನೆ ಮುಖ್ಯರಸ್ತೆಯಲ್ಲಿ ಸಾಗಿ ನಿಶ್ಮಿತಾ ಸರ್ಕಲ್ವರೆಗೆ ತೆರಳಿ ಅಲ್ಲಿಂದ ಮರಳಿ, ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಂಪನ್ನಗೊಂಡಿತು. ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಆದಿ ಕಲ್ಚರಲ್ ಅಕಾಡೆಮಿ ಮೂಡುಬಿದಿರೆ, ಗಜಾನನ ಭಜನಾ ಮಂಡಳಿ ಒಂಟಿಕಟ್ಟೆ, ವಿಪ್ರ ಸಮಾಜ, ರಾಮಕ್ಷತ್ರಿಯ ಸೇವಾ ಸಂಘ, ಸತ್ಯನಾರಾಯಣ ಸೇವಾ ಸಮಿತಿ ಗಾಂಧಿನಗರ, ಸ್ವಾಮಿ ಶ್ರೀ ನಿತ್ಯಾನಂದ ಬಂಟರ ಭಜನಾ ಮಂಡಳಿ ಮೂಡುಬಿದಿರೆ, ವಿಶ್ವಕರ್ಮ ಭಜನಾ ಮಂಡಳಿ ಸಹಿತ ಸುಮಾರು 250 ಮಂದಿ ಭಜಕರನ್ನೊಳಗೊಂಡ 12 ಭಜನಾ ತಂಡಗಳು ಭಾಗವಹಿಸಿದ್ದವು. ಜವನೆರ್ ಬೆದ್ರ ಫೌಂಡೇಶನ್ ಸ್ಥಾಪಕ ಅಮರ್ ಕೋಟೆ ನಿರೂಪಿಸಿದರು. ಉದ್ಯಮಿ ಶ್ರೀಪತಿ ಭಟ್, ವಕೀಲ ಜಯಪ್ರಕಾಶ್ ಭಂಡಾರಿ, ಪುರಸಭಾ ಸದಸ್ಯ ರಾಜೇಶ್ ನಾಯಕ್, ಕುಮಾರ್ ಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.