ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಶ್ರೀನಿವಾಸ್‌ ಆಸ್ಪತ್ರೆಯಲ್ಲಿ ಬಾಲಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

Last Updated 23 ಜುಲೈ 2021, 16:31 IST
ಅಕ್ಷರ ಗಾತ್ರ

ಮಂಗಳೂರು: ತೀವ್ರ ಉಸಿರಾಟದ ತೊಂದರೆಯೊಂದಿಗೆ ಸಣ್ಣ ಕರುಳಿನ ಭಾಗದ ಅಲ್ಸರ್‌ ರಂಧ್ರದ (ಡ್ಯುವೋಡೆನಲ್ ಅಲ್ಸರ್ ರಂಧ್ರ) ಸಮಸ್ಯೆಯಿಂದ ಹೊಟ್ಟೆಯಲ್ಲಿ ಗಾಳಿ ತುಂಬಿ ಸಂಕಟಪಡುತ್ತಿದ್ದ ಬಾಲಕನಿಗೆ ಶ್ರೀನಿವಾಸ್‌ ಆಸ್ಪತ್ರೆಯ ತುರ್ತು ನಿಗಾ ಘಟಕವು ಶಸ್ತ್ರಚಿಕಿತ್ಸೆ ನಡೆಸಿ ಗುಣ‍ಪಡಿಸಿದೆ.

ಚಿಕಿತ್ಸೆ ಪಡೆದ 5 ವರ್ಷದ ಬಾಲಕ ಭುವಿತ್‌ ಈಗ ಚೇತರಿಸಿಕೊಂಡಿದ್ದಾನೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಬಾಲಕನ ಹೊಟ್ಟೆ ಊದಿಕೊಂಡು ಉಸಿರಾಡಲು ಕಷ್ಟವಾಗಿತ್ತು. ಆಮ್ಲಜನಕದ ಸ್ಯಾಚುಟರೇಶನ್‌ 70ರಷ್ಟಿತ್ತು. ತಕ್ಷಣವೇ ಮಕ್ಕಳ ತಜ್ಞ ಶಸ್ತ್ರಚಿಕಿತ್ಸಕ ಡಾ. ಸುಹಾಸ್‌ ಹಾಗೂ ಡಾ. ವಿ.ಪಿ. ಸಿಂಗ್‌ ತೀವ್ರ ನಿಗಾ ಘಟಕಕ್ಕೆ ದಾಖಲಿಸಿದರು.

ಹೊಟ್ಟೆಯಲ್ಲಿ ಗಾಳಿ ತುಂಬಿದೆ ಹಾಗೂ ಒಂದು ರಂಧ್ರವಿದೆ ಎಂದು ಎಕ್ಸ್‌ ರೇಯಿಂದ ಖಚಿತಗೊಂಡ ಬಳಿಕ, ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ರಂಧ್ರವು ಸಣ್ಣ ಕರುಳಿನ ಮೊದಲ ಭಾಗದಲ್ಲಿತ್ತು. ಶಸ್ತ್ರಚಿಕಿತ್ಸೆಯ ನಂತರ ಭುವಿತ್‌ನನ್ನು ಇಲೆಕ್ಟಿವ್‌ ಪೋಸ್ಟ್‌ ಆಪರೇಟಿವ್‌ ವೆಂಟಿಲೇಟರ್‌ನಲ್ಲಿ ಇರಿಸಲಾಯಿತು. ಡಾ.ವಿ.ಪಿ. ಸಿಂಗ್ ಅವರ ಮಕ್ಕಳ ಶಸ್ತ್ರಚಿಕಿತ್ಸಾ ತಂಡ, ಇಂಟೆನ್ಸ್‌ವಿಸ್ಟ್ ಡಾ.ಜಯಪ್ರಕಾಶ್, ಅರಿವಳಿಕೆ ತಂಡ, ದಾದಿಯರ ತಂಡ ಕಾರ್ಯನಿರ್ವಹಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT