ಮಂಗಳೂರು: ರಾಜ್ಯದಲ್ಲಿ ಒಳ ಮೀಸಲಾತಿ ಸಮೀಕ್ಷೆಯ ಹೆಸರಿನಲ್ಲಿ ಸಂವಿಧಾನ ವಿರೋಧಿ ಕೆಲಸ ನಡೆಯುತ್ತಿದೆ. ಈ ಅಕ್ರಮಗಳನ್ನು ಸರಿಪಡಿಸುವವರೆಗೆ, ಸಮೀಕ್ಷಾ ಕಾರ್ಯ ಸ್ಥಗಿತಗೊಳಿಸಬೇಕು ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ- ಸಂಸ್ಥೆಗಳ ಮಹಾಒಕ್ಕೂಟ ಆಗ್ರಹಿಸಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಒಕ್ಕೂಟದ ಅಧ್ಯಕ್ಷ ಲೋಲಾಕ್ಷ, ಪರಿಶಿಷ್ಟ ಜಾತಿಗಳ 101 ಜಾತಿಗಳ ಒಳ ಮೀಸಲಾತಿ ಕಲ್ಪಿಸಲು ರಚಿಸಿದ್ದ ನಿವೃತ್ತ ನ್ಯಾ. ಎಚ್. ಎನ್. ನಾಗಮೋಹನದಾಸ್ ನೇತೃತ್ವದ ಏಕ ಸದಸ್ಯ ಆಯೋಗದ ಸೂಚನೆಯಂತೆ, ಸಮೀಕ್ಷೆ ಪ್ರಾರಂಭವಾಗಿದೆ. ಈ ಸಮೀಕ್ಷೆಯಲ್ಲಿ ದೊಡ್ಡ ಜಾತಿಯನ್ನು ಒಳಗೆ ತರುವ ಷಡ್ಯಂತ್ರವಿದೆ. ಇದನ್ನು ಒಕ್ಕೂಟ ವಿರೋಧಿಸಿದ್ದು, ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಂಬಂಧ ಪಟ್ಟವರಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟ ನಿಲುವು ತಾಳದಿದ್ದಲ್ಲಿ ಮುಂದಿನ ಹೋರಾಟದ ಬಗ್ಗೆ ಯೋಚಿಸಲಾಗುವುದು ಎಂದರು.

ನ್ಯಾ. ಎಚ್. ಎನ್. ನಾಗಮೋಹನ ದಾಸ್ ಅವರು ಯೂಟ್ಯೂಬ್ ಸಂದರ್ಶನವೊಂದರಲ್ಲಿ, ಬೇರೆ ಧರ್ಮಕ್ಕೆ ಮತಾಂತರಗೊಂಡವರು ಆಚರಣೆಯಲ್ಲಿ ಆ ಧರ್ಮವನ್ನು ಅನುಸರಿಸುತ್ತ, ಸರ್ಕಾರದ ಅನುಕೂಲ ಪಡೆಯಲು ದಾಖಲೆಗಳಲ್ಲಿ ಪರಿಶಿಷ್ಟ ಜಾತಿ ಎಂದು ಮುಂದುವರಿಸಿ, ಉಪ ಜಾತಿಯನ್ನು ಬರೆಸಿದ್ದರೆ ಸಮೀಕ್ಷೆಗೆ ಒಳಪಡಬಹುದು ಎಂದಿದ್ದಾರೆ. ಆಯೋಗದ ಅಧ್ಯಕ್ಷರ ಈ ಮಾತು ಆಘಾತಕಾರಿಯಾಗಿದೆ.

ಇದು ಸಂವಿಧಾನ ಮತ್ತು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಸಂವಿಧಾನದ ವಿಧಿ 341(1) ರ ಅಡಿಯಲ್ಲಿ ಭಾರತದ ರಾಷ್ಟ್ರಪತಿ ಹೊರಡಿಸಿರುವ ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶ, 1950 ರಲ್ಲಿ (ತಿದ್ದುಪಡಿಗಳು ಸೇರಿದಂತೆ) ಹಿಂದೂ, ಸಿಖ್ ಮತ್ತು ಭೌದ್ಧಧರ್ಮ ಆಚರಿಸುವವರನ್ನು ಹೊರತು ಪಡಿಸಿ ಇತರ ಯಾರನ್ನೂ ಪರಿಶಿಷ್ಟ ಜಾತಿಯವರು ಎಂದು ಪರಿಗಣಿಸಲು ಸಂವಿಧಾನ ಅವಕಾಶ ನೀಡುವುದಿಲ್ಲ. ಯಾರೇ ಆಗಲಿ, ಇದಕ್ಕೆ ವ್ಯತಿರಿಕ್ತವಾಗಿ, ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದಿದ್ದರೆ, ಅದು ಸಂವಿಧಾನಕ್ಕೆ ಅಪಚಾರ, ವಂಚನೆ ಎಸಗಿ ಪಡೆದ ಜಾತಿ ಪ್ರಮಾಣಪತ್ರ ಎನಿಸಿಕೊಳ್ಳುತ್ತದೆ ಎಂದು ಹೇಳಿದರು.

ಆಯೋಗದ ಅಧ್ಯಕ್ಷರ ಹೇಳಿಕೆಯು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ (ದೌರ್ಜನ್ಯ ತಡೆ) ಕಾಯ್ದೆ, 1989 (ತಿದ್ದುಪಡಿಗಳ ಸಹಿತ) ರ ಸೆಕ್ಷನ್ 3(1)(q) ಮತ್ತು (u) ಹಾಗೂ ಸೆಕ್ಷನ್ 3(2)(vi) ಮತ್ತು (vii) ರ ಅನ್ವಯ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೇಳಿದರು.

ಈ ಅಕ್ರಮ ತಡೆಯಲು ಈ ಕೂಡಲೇ ರಾಜ್ಯ ಸರ್ಕಾರ ಮತ್ತು ಸಮೀಕ್ಷೆ ನಿರ್ವಹಿಸುತ್ತಿರುವ ನೋಡಲ್ ಇಲಾಖೆಯಾದ ಸಮಾಜ ಕಲ್ಯಾಣ ಇಲಾಖೆಯು, ಆಯೋಗದ ಅಧ್ಯಕ್ಷರ ಈ ಹೇಳಿಕೆಯನ್ನು ಬಹಿರಂಗವಾಗಿ, ಅಧಿಕೃತ ಹೇಳಿಕೆ ಅಥವಾ ಸ್ಪಷ್ಟನೆ ಮೂಲಕ, 'ಆಕ್ಷೇಪಾರ್ಹ ತಪ್ಪು ಹೇಳಿಕೆ' ಎಂದು ತಿರಸ್ಕರಿಸ ಬೇಕು. 'ಕ್ರಿಶ್ಚಿಯನ್ ಅಥವಾ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿರುವ ಯಾರೂ, ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಹೊಂದಿರಲಿ ಅಥವಾ ಇಲ್ಲದಿರಲಿ, ಅವರು ಪರಿಶಿಷ್ಟ ಜಾತಿಯವರು ಅಲ್ಲ, ಅವರನ್ನು ಈ ಸಮೀಕ್ಷೆಗೆ ಒಳ ಪಡಿಸಲಾಗುವುದಿಲ್ಲ ಎಂಬುದನ್ನು ಸ್ಪಷ್ಟ ಪಡಿಸ ಬೇಕು. ಸಮೀಕ್ಷೆಯಲ್ಲಿ ಪ್ರತಿಯೊಬ್ಬರ ಧರ್ಮದ ಹೆಸರು ನೋಂದಣಿ ಮಾಡಲು ಅಗತ್ಯವಾದ ಪ್ರತ್ಯೇಕ ಕಾಲಂ ಒಂದನ್ನು ಸೇರಿಸಲು ತುರ್ತು ತಾಂತ್ರಿಕ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.