ವಿಟ್ಲ: ಅಳಿಕೆ ಗ್ರಾಮದ ಕಾನತ್ತಡ್ಕ-ರೆಂಜಡಿ ರಸ್ತೆಗೆ ಗುಡ್ಡ ಕುಸಿದು, ಸಂಚಾರ ಸಂಪೂರ್ಣ ಬಂದ್ ಆಗಿದೆ.

ಭಾರಿ ಮಳೆಗೆ ಶನಿವಾರ ಬೆಳಗ್ಗೆ ಗುಡ್ಡ ಕುಸಿದು ರಸ್ತೆಯಲ್ಲಿ ಮಣ್ಣು ತುಂಬಿ ವಾಹನ ಅಷ್ಟೇ ಅಲ್ಲ ನಡೆದಾಡಲೂ ಆಗಲಿಲ್ಲ ಎಂದು ಸ್ಥಳೀಯರು ತಿಳಿಸಿದರು. ಸುಮಾರು 50 ಅಡಿ ಎತ್ತರದ ಗುಡ್ಡ ಸುಮಾರು 50 ಅಡಿಯುದ್ದಕ್ಕೂ ಕುಸಿದು ರಸ್ತೆಗೆ ಬಿದ್ದಿತ್ತು. ಸ್ಥಳೀಯರಾದ ರೆಂಜಡಿ ನೀಲಪ್ಪ ಗೌಡ ಮತ್ತು ಅಬ್ದುಲ್ ಹಮೀದ್ ಗಿಡ, ಮರ, ಪೊದರುಗಳನ್ನು ಹಾಗೂ ಸ್ವಲ್ಪ ಭಾಗದಲ್ಲಿ ಮಣ್ಣನ್ನು ತೆರವುಗೊಳಿಸಿ, ನಡೆದಾಡಲು ಅನುಕೂಲ ಮಾಡಿದ್ದರು.

ಅಳಿಕೆ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದ ತತ್ಕ್ಷಣ ಪಿಡಿಒ ಮತ್ತು ಅಧ್ಯಕ್ಷ ಪದ್ಮನಾಭ ಪೂಜಾರಿ ಬಂದು , ಜೆಸಿಬಿ ಮೂಲಕ ಮಧ್ಯಾಹ್ನ ಮಣ್ಣನ್ನು ತೆರವುಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.