ಕಾಸರಗೋಡು:ನಿವೃತ್ತ ಬ್ಯಾಂಕ್ ಉದ್ಯೋಗಿ ಹಾಗೂ ಕರ್ನಾಟಕ ಉತ್ತರ ಭಾಗದಲ್ಲಿ ಆರ್‌ಎಸ್‌ಎಸ್ ಪ್ರಚಾರ ಪ್ರಮುಖರಾಗಿದ್ದ ರಾಮಚಂದ್ರ ಭಟ್(66) ಮಂಗಳವಾರ ರಾತ್ರಿ 9ಕ್ಕೆ ಹೃದಯಾಘಾತದಿಂದ ನಿಧನರಾದರು.

ರಾಮಚಂದ್ರ ಅವರು ಕಾಸರಗೋಡು ಸಮೀಪದ ಮುಳ್ಳೇರಿಯಾದವರು. ಬಸ್‌ನಲ್ಲಿ ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿದ್ದಾಗ ಬಂಟ್ವಾಳ ಕ್ರಾಸ್ ಬಳಿಹೃದಯಾಘಾತವಾಗಿದೆ. ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಮೃತದೇಹವನ್ನು ಹುಟ್ಟೂರಿಗೆ ತರಲಾಗಿದೆ.

ಅವರಿಗೆ ಪತ್ನಿಹಾಗೂ ಇಬ್ಬರು ಮಕ್ಕಳಿದ್ದು, ಮಗ ಅಮೆರಿಕದಲ್ಲಿ ಹಾಗೂ ಮಗಳು ಮಂಗಳೂರಿನಲ್ಲಿದ್ದಾರೆ.ಮುಳ್ಳೇರಿಯಾದಲ್ಲಿ ಇಂದು ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಬಾಲ್ಯದಿಂದಲೇ ಆರ್‌ಎಸ್‌ಎಸ್‌ನಲ್ಲಿ ತೊಡಗಿಸಿಕೊಂಡಿದ್ದ ರಾಮಚಂದ್ರ, ಬ್ಯಾಂಕ್ ಉದ್ಯೋಗಿಯಾಗಿದ್ದರು. ಕರ್ನಾಟಕದ ಉತ್ತರ ಭಾಗದಲ್ಲಿ ಕರ್ತವ್ಯದ ಹೆಚ್ಚು ಅವಧಿಯನ್ನು ಕಳೆದ ಅವರನ್ನುಇದೇ ಭಾಗದಲ್ಲಿ ಆರ್‌ಎಸ್‌ಎಸ್ ಪ್ರಚಾರ ಪ್ರಮುಖರನ್ನಾಗಿ ನೇಮಿಸಲಾಗಿತ್ತು. ಬೆಳಗಾವಿಯಲ್ಲಿ ಅವರುನೆಲೆಸಿದ್ದರು.

ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಹುರಿದುಂಬಿಸುವ ನೂರಾರು ಗೀತೆಗಳನ್ನು ರಚಿಸಿದ್ದರು. ಅವರ ‘ಯುವಮನದೊಳಿಂದು ಸೀಮೋಲಂಘನದ ತವಕ’ ಎಂಬ ಗೀತೆಸಂಘದ ವಲಯದಲ್ಲಿ ಸಾಕಷ್ಟು ಜನಪ್ರಿಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.