ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಣ್ಣಿನಲ್ಲಿ ಆಮ್ಲೀಯ ಗುಣ ಜಾಸ್ತಿ. ಆದರೆ, ಇಲ್ಲಿ ರಸಗೊಬ್ಬರ ಮತ್ತು ಮನೆ ಗೊಬ್ಬರ ಬಳಕೆ ಹೆಚ್ಚಿರುವ ಕಾರಣ ಸಾವಯವ ಇಂಗಾಲದ ಪ್ರಮಾಣ ಉತ್ತಮವಾಗಿದೆ. ಮಣ್ಣಿನ ಆರೋಗ್ಯ ಕಾರ್ಡ್ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.

ಈ ನಡುವೆ, ಜಿಲ್ಲೆಯಲ್ಲಿ 18 ಗ್ರಾಮಗಳು ಕಡಿಮೆ ಉತ್ಪಾದಕತೆಯ ಪ್ರದೇಶಗಳು ಎಂಬ ಸಂಗತಿ ಸಮೀಕ್ಷೆಯಲ್ಲಿ ಹೊರಬಿದ್ದಿದೆ. ಈ ಗ್ರಾಮಗಳ ಮಣ್ಣು ಪರೀಕ್ಷಿಸಿ, ಅವುಗಳ ಗುಣಮಟ್ಟ ಹೆಚ್ಚಿಸಲು ಪ್ರಯತ್ನಗಳು ನಡೆಯುತ್ತಿವೆ. ಆದರೆ, ರೈತರು ಸ್ವ ಕಾಳಜಿಯಿಂದ ಮಣ್ಣು ಪರೀಕ್ಷೆ ನಡೆಸಬೇಕೆಂದರೆ ಜಿಲ್ಲಾ ಕೇಂದ್ರ ಮಂಗಳೂರಿಗೆ ಬರಬೇಕಾದ ಪರಿಸ್ಥಿತಿ ಇದೆ. ಕೃಷಿ ವಿಜ್ಞಾನ ಕೇಂದ್ರದಲ್ಲಿ ಇರುವ ಮಣ್ಣು ಪರೀಕ್ಷಾ ಉಪಕರಣಗಳು ಹಾಳಾಗಿರುವ ಕಾರಣ ಅಲ್ಲಿಯೂ ಮಣ್ಣು ಪರೀಕ್ಷೆ ನಡೆಯುತ್ತಿಲ್ಲ. ಹೀಗಾಗಿ, ಸರ್ಕಾರಿ ವ್ಯವಸ್ಥೆಯಲ್ಲಿ ಕೃಷಿ ಇಲಾಖೆಯ ಕೇಂದ್ರವೊಂದೇ ಈಗ ಕೃಷಿಕರಿಗೆ ಆಸರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಯಡಿ ರೈತರ ಹೊಲದ ಮಣ್ಣಿನ ಗುಣಧರ್ಮ ಪರಿಶೀಲಿಸಿ ಕೃಷಿ ಇಲಾಖೆ ಮಣ್ಣಿನ ಆರೋಗ್ಯ ಕಾರ್ಡ್ ನೀಡುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9,032 ಮಣ್ಣಿನ ಆರೋಗ್ಯ ಕಾರ್ಡ್ ವಿತರಣೆಯಾಗಿದೆ.

ಹೆಚ್ಚು ಮಳೆಯಾಗುವ ಪ್ರದೇಶ ಆಗಿರುವ ಕಾರಣ ಮಣ್ಣಿನಲ್ಲಿ ಸಾರಜನಕ, ಪೊಟ್ಯಾಷ್ ಪೋಷಕಾಂಶದ ಕೊರತೆ ಇದೆ. ಬಹಳಷ್ಟು ಮಣ್ಣಿನ ಮಾದರಿ ಪರಿಶೀಲಿಸಿದಾಗ ಸೂಕ್ಷ್ಮ ಪೋಷಕಾಂಶಗಳಾದ ಬೋರಾನ್, ಕಬ್ಬಿಣ ಕಡಿಮೆ ಇರುವುದು ಅರಿವಿಗೆ ಬಂದಿದೆ. ಮೂರು ವರ್ಷಕ್ಕೊಮ್ಮೆ ಪ್ರತಿ ಹೆಕ್ಟೇರ್ಗೆ 8 ಕೆ.ಜಿ.ಯಷ್ಟು ಕೊಟ್ಟರೆ ಒಳ್ಳೆಯದು. ಅಲ್ಲದೆ, ಆಮ್ಲೀಯ ಗುಣ ಇರುವ ಮಣ್ಣಿಗೆ ಯಾವುದೇ ರಸ ಗೊಬ್ಬರ ನೀಡಿದರೂ ಅದನ್ನು ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಹೀಗಾಗಿ, ಪ್ರತಿವರ್ಷ ಕೃಷಿ ಸುಣ್ಣ ಬಳಕೆ ಮಾಡಿದರೆ ಉತ್ತಮ. ಎಕರೆಗೆ 200 ಕೆ.ಜಿ.ವರೆಗೂ ಬಳಸಬಹುದು ಎನ್ನುತ್ತಾರೆ ತಜ್ಞರು.

ಕೃಷಿ ಇಲಾಖೆಯು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆ, ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ಮಣ್ಣು ಪರೀಕ್ಷೆ ನಡೆಯುತ್ತವೆ. ಆ ಮೂಲಕ ಮಣ್ಣಿನ ಫಲವತ್ತತೆ ಪರಿಶೀಲಿಸಲಾಗುತ್ತದೆ. ಇದರ ಆಧಾರದ ಮೇಲೆ ಬೆಳೆ ಆಯ್ಕೆ ಮಾಡುವುದು ಸುಲಭ. ಜಿಲ್ಲೆಯಲ್ಲಿ ಒಟ್ಟು 9,545 ಮಣ್ಣಿನ ಮಾದರಿ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಜಿಲ್ಲೆಯ ರೈತರು ಸಾಮಾನ್ಯವಾಗಿ ಸಾವಯವ ಗೊಬ್ಬರ, ಹಟ್ಟಿ ಗೊಬ್ಬರ, ಎರೆಹುಳು ಗೊಬ್ಬರ, ಮನೆಯಲ್ಲೇ ತಯಾರಿಸುವ ಗೊಬ್ಬರ ಬಳಸುವುದರಿಂದ ಮಣ್ಣಿನ ಗುಣಮಟ್ಟ ಉತ್ತಮವಾಗಿದೆ. ಆದರೂ, ಮಣ್ಣು ಪರೀಕ್ಷೆ ಕಾರ್ಯವನ್ನು ನಿರಂತರವಾಗಿ ನಡೆಸಲಾಗುತ್ತದೆ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ.

ಮಣ್ಣು ಪರೀಕ್ಷೆ ಹೇಗೆ?: ಇಲಾಖೆಯಿಂದ 2–3 ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು, ಸರ್ವೆ ಸಂಖ್ಯೆ ಪ್ರಕಾರ ಅಲ್ಲಿನ ಸುಮಾರು 200 ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ಸರ್ವೆ ಸಂಖ್ಯೆ ಆಧರಿಸಿ ಇದನ್ನು ನಡೆಸಲಾಗುತ್ತದೆ. ಇಲಾಖೆಯೇ ರೈತರ ಕೃಷಿ ಭೂಮಿಗೆ ತೆರಳಿ ಮಣ್ಣು ಸಂಗ್ರಹಿಸಿದರೆ, ಅದನ್ನು ಉಚಿತವಾಗಿ ಮಾಡಲಾಗುತ್ತದೆ. ರೈತರು ಪರೀಕ್ಷೆಗೆ ತಂದರೆ ₹200 ಶುಲ್ಕ ಇರುತ್ತದೆ. ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ತಿಳಿಸಿದರೆ ಮಣ್ಣು ಮಾದರಿ ಸಂಗ್ರಹಿಸಲು ಅವರು ನೆರವಾಗುತ್ತಾರೆ ಎಂದು ಅವರು ಮಾಹಿತಿ ನೀಡಿದರು.

Highlights - ಕಳೆದ ವರ್ಷ ಮಾಡಿದ ಮಣ್ಣು ಪರೀಕ್ಷೆ 9,500 ರೈತರು ಸ್ವಪ್ರೇರಣೆಯಿಂದ ತಂದ ಮಣ್ಣಿನ ಮಾದರಿ 401 ಕನಿಷ್ಠ 3 ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಿದರೆ ಉತ್ತಮ

ರೈತರು 2–3 ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸುವುದರಿಂದ ಕೊರತೆಯನ್ನು ಗುರುತಿಸಿ ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಬಹುದು.
ಹೊನ್ನಪ್ಪ ಗೌಡ ಜಂಟಿ ಕೃಷಿ ನಿರ್ದೇಶಕ

ಕಡಿಮೆ ಇಳುವರಿ: 18 ಗ್ರಾಮಗಳು ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ ಬೆಳೆಗಳ ಇಳುವರಿ ಹೆಚ್ಚಿಸುವ ಉದ್ದೇಶದಿಂದ ಕಡಿಮೆ ಉತ್ಪಾದಕತೆ ಇರುವ ಹಳ್ಳಿಗಳನ್ನು ಗುರುತಿಸಲಾಗಿದೆ. ಬೆಳೆ ಕಟಾವು ಕಾರ್ಯಕ್ರಮದ ವೇಳೆ ಉತ್ಪಾದನೆ ಆಧರಿಸಿ ಸಾಂಖ್ಯಿಕ ಇಲಾಖೆಯು ಇವುಗಳನ್ನು ಪಟ್ಟಿ ಮಾಡಲಾಗಿದೆ. ಜಿಲ್ಲೆಯಲ್ಲಿ ಇಂತಹ 18 ಗ್ರಾಮಗಳು ಇವೆ. ಹೀಗೆ ಗುರುತಿಸಿರುವ ಪ್ರತಿ ಗ್ರಾಮದಲ್ಲಿ 33 ಮಣ್ಣಿನ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ಮಣ್ಣಿನಲ್ಲಿರುವ ಕೊರತೆಗಳನ್ನು ಗಮನಿಸಿ ಪೋಷಕಾಂಶ ನೀಡಲು ರೈತರಿಗೆ ಮಾಹಿತಿ ನೀಡುವ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸಲು ಮಾರ್ಗದರ್ಶನ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸಂಗ್ರಹ ಮಾದರಿ ಬದಲಾಗಲಿ

ನಾವು ಮಣ್ಣನ್ನು ತೆಗೆದುಕೊಂಡು ಹೋಗಿ ಪರೀಕ್ಷೆ ಮಾಡಿಸಲು ವೆಚ್ಚವಾಗುತ್ತದೆ. ಇಲಾಖೆಯೂ ಶುಲ್ಕ ವಿಧಿಸುತ್ತದೆ. ಅಲ್ಲದೆ ವರದಿ ಪಡೆಯಲು ಮತ್ತೆ ಅಲೆದಾಡಬೇಕು. ಬೇರೆ ಬೇರೆ ಕಡೆಪರೀಕ್ಷಿಸಿದಾಗ ಬೇರೆ ಬೇರೆ ವರದಿ ಬರುತ್ತದೆ. ಇದು ರೈತರನ್ನು ಗೊಂದಲಕ್ಕೆ ಸಿಲುಕಿಸುತ್ತದೆ. ಒಮ್ಮೆ ಮಣ್ಣು ಪರೀಕ್ಷೆ ಮಾಡಿಸಲು ಕನಿಷ್ಠವೆಂದರೂ ₹1000 ಖರ್ಚಾಗುತ್ತದೆ ಎನ್ನುತ್ತಾರೆ ರೈತ ಸಂಘದ ಮುಖಂಡ ಶ್ರೀಧರ ಶೆಟ್ಟಿ. ಗ್ರಾಮದ ಒಂದು ಭಾಗದಲ್ಲಿ ಮಣ್ಣು ಸಂಗ್ರಹಿಸಿ ಪರೀಕ್ಷಿಸಿದರೆ ಇಡೀ ಪ್ರದೇಶದ ಮಣ್ಣಿನ ಗುಣ ಗೊತ್ತಾಗುವುದಿಲ್ಲ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶದ ಭೌಗೋಳಿಕ ಸ್ಥಿತಿ ಭಿನ್ನವಾಗಿರಬಹುದು. ಇಲಾಖೆಯ ಮಣ್ಣು ಮಾದರಿ ಸಂಗ್ರಹ ಪದ್ಧತಿ ಬದಲಾಯಿಸಬೇಕು. ಅಲಂಗಾರಿನಲ್ಲಿ ಮಣ್ಣು ಪರೀಕ್ಷೆ ಕೇಂದ್ರ ಮಾಡುವುದಾಗಿ ಶಾಸಕರು ಭರವಸೆ ನೀಡಿದ್ದರು. ಆದರೆ ಅದು ಈಡೇರಿಲ್ಲ. ರೈತರಿಗೆ ಅನುಕೂಲವಾಗುವಂತೆ ಮಣ್ಣು ಪರೀಕ್ಷಾ ಕೇಂದ್ರಗಳ ಸಂಖ್ಯೆ ಹೆಚ್ಚಾಗಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.