ಶುಕ್ರವಾರ, ಜನವರಿ 27, 2023
26 °C

ಸೂರ್ಯಗ್ರಹಣ: ಕುಕ್ಕೆಯಲ್ಲಿ 25ರಂದು ಸೇವೆಯಲ್ಲಿ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅ.25ರಂದು ಸೂರ್ಯಗ್ರಹಣದ ಪ್ರಯುಕ್ತ ಯಾವುದೇ ಸೇವೆಗಳು ಮತ್ತು ಭೋಜನ ಪ್ರಸಾದ ಇರುವುದಿಲ್ಲ ಎಂದು ದೇವಳದ ಪ್ರಕಟಣೆ ತಿಳಿಸಿದೆ.

ಅಂದು ಬೆಳಿಗ್ಗೆ 7ರಿಂದ 8.30ರತನಕ, 10.30ರಿಂದ ಮಧ್ಯಾಹ್ನ 1ರತನಕ ಹಾಗೂ ಗ್ರಹಣದ ಸಮಯವಾದ ಸಂಜೆ 5.11ರಿಂದ 6.28ರ ತನಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಅ.26ರಂದು ಬೆಳಿಗ್ಗೆ ದೇವಳದಲ್ಲಿ ಶುದ್ಧಿ ಕಾರ್ಯದ ಬಳಿಕ ನಿತ್ಯ ಪೂಜೆ ನಡೆಯಲಿದೆ. ಹೀಗಾಗಿ, 9 ಗಂಟೆಯ ನಂತರ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಆ ಬಳಿಕ ಸೇವಾಧಿಗಳು ಆರಂಭಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು