ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ್ವಾಸ್‌ ಮಡಿಲಿಗೆ 14 ಕೂಟ ದಾಖಲೆ

ಮಂಗಳೂರು ವಿವಿ ಅಂತರ ಕಾಲೇಜು ಅಥ್ಲೆಟಿಕ್ಸ್‌: ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿ
Last Updated 24 ಡಿಸೆಂಬರ್ 2021, 2:16 IST
ಅಕ್ಷರ ಗಾತ್ರ

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯದ 41 ನೇ ಅಂತರ ಕಾಲೇಜು ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಆಳ್ವಾಸ್‌ ಕಾಲೇಜು 487 ಅಂಕ ದಾಖಲಿಸಿ ಸಮಗ್ರ ಪ್ರಶಸ್ತಿ ಬಾಚಿಕೊಂಡಿದೆ.

ಗುರುವಾರ ಮೂಡುಬಿದಿರೆ ಸ್ವರಾಜ್ ಮೈದಾನದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಕೊನೆ ದಿನವೂ ಕೂಡ ‌ಆಳ್ವಾಸ್‌ ಕಾಲೇಜು ವಿದ್ಯಾರ್ಥಿಗಳು ಅಥ್ಲೆಟಿಕ್ಸ್‌ನಲ್ಲಿ ಪಾರಮ್ಯ ಮೆರೆದಿದ್ದಾರೆ.

‌19 ವರ್ಷದಿಂದ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿ ತನ್ನಲ್ಲೆ ಉಳಿಸಿಕೊಂಡಿರುವುದು ಹೊಸ ದಾಖಲೆಗೆ ಮುನ್ನುಡಿ ಆಗಿದೆ. ಮಹಿಳೆಯರ ವಿಭಾಗದಲ್ಲಿ 240 ಅಂಕ ದಾಖಲಿಸಿ ಆಳ್ವಾಸ್ ಕಾಲೇಜು ತಂಡ ಪ್ರಶಸ್ತಿ ಪಡೆಯಿತು. ವಾಮದಪದವಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ, ಉಜಿರೆ ಎಸ್‌ಡಿಎಂ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡವು.

ಪುರುಷರ ವಿಭಾಗದಲ್ಲಿ 247 ಅಂಕ ದಾಖಲಿಸಿದ ಆಳ್ವಾಸ್ ಕಾಲೇಜು ತಂಡವು ಪ್ರಶಸ್ತಿ ಚಾಂಪಿಯನ್‌ ಸ್ಥಾನ ಮುಡಿಗೇರಿಸಿಕೊಂಡಿತು. ಉಜಿರೆ ಎಸ್‌ಡಿಎಂ, ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ನಂತರದ ಸ್ಥಾನ ಪಡೆದವು. ಆಳ್ವಾಸ್ ತಂಡ 43 ಚಿನ್ನ, 32 ಬೆಳ್ಳಿ ಹಾಗೂ 4 ಕಂಚು ಗಳಿಸಿದೆ.

ಅತ್ಯುತ್ತಮ ಪಥಸಂಚಲನಕ್ಕೆ ಮಂಗಳೂರು ಯುನಿವರ್‌ಸಿಟಿ ಕ್ಯಾಂಪಸ್ ಕಾಲೇಜು ’ಕೊಣಾಜೆ’ ಪ್ರಶಸ್ತಿ ಪಡೆದಿದೆ.
ಆಳ್ವಾಸ್‌ ಕಾಲೇಜಿನ ಲಿಖಿತಾ ಹಾಗೂ ವಿಘ್ನೇಶ್ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದರು.

ಬುಧವಾರ ಹಾಗೂ ಗುರುವಾರ ನಡೆದ ಅಥ್ಲೆಟಿಕ್ಸ್‌ ಚಾಂಪಿಯನ್‌ ಷಿಪ್‌ನಲ್ಲಿ ಒಟ್ಟು 14 ಕೂಟ ದಾಖಲೆಗಳಾಗಿವೆ.ಕೂಟ ದಾಖಲೆ ಮಾಡಿದ ಎಲ್ಲ 14 ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ತಲಾ ₹ 5 ಸಾವಿರ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.

ಸಮಾರೋಪದಲ್ಲಿ ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಜೆರಾಲ್ಡ್ ಸಂತೋಷ್ ಡಿಸೋಜ, ಸಹ ನಿರ್ದೇಶಕ ಪ್ರಸನ್ನ ಕುಮಾರ್, ವಿವಿ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಜೇಮ್ಸ್ ಒಲಿವರ್, ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ.ಕುರಿಯನ್ ಇದ್ದರು. ದೈಹಿಕ ಶಿಕ್ಷಣ ನಿರ್ದೆಶಕ ಪ್ರವೀಣ್ ಕುಮಾರ್ ನಿರೂಪಿಸಿದರು.

ಕೊನೆ ದಿನ 9 ಕೂಟ ದಾಖಲೆ: ಆಳ್ವಾಸ್‌ ಪಾರಮ್ಯ

10,000 ಮೀಟರ್‌ ಪುರುಷರ ಓಟ: ಆಳ್ವಾಸ್‌ ಆದೇಶ್ (30.09.6 ಸೆಕೆಂಡು), ಆಳ್ವಾಸ್‌ ಕಾಲೇಜಿನ ರಾಬಿನ್ ಸಿಂಗ್ (31.16.4 ಸೆ) (ಹಳೆಯ) ದಾಖಲೆ ಮೀರಿದ್ದಾರೆ. ಪುರುಷರ ಹ್ಯಾಮರ್ ಥ್ರೋ: ಅಜಯ್ ಕುಮಾರ್ (61.48) ಮೀಟರ್‌ ದೂರ, ಸುರೇಂದ್ರ ಕುಮಾರ್ ಅವರ (55.88 ಮೀ) (ಹಳೆಯ) ದಾಖಲೆ ಮೀರಿದ್ದಾರೆ.

ಪುರುಷರ ಜ್ಯಾವಲಿನ್ ಥ್ರೋ: ವಿಕ್ರಾಂತ್ ಮಲಿಕ್, 77.57 ಮೀಟರ್‌, ಆಳ್ವಾಸ್‌ ನ ಅರುಣ್ ಬೇಬಿ (77.44 ಮೀಟರ್‌) ಅವರ ಹಳೆಯ ದಾಖಲೆ ಮೀರಿದ್ದಾರೆ.

ಮಹಿಳೆಯರ ಹೈಜಂಪ್‌: ಸಿಂಚನಾ ಎಂ. ಎಸ್ 1.80 ಮೀಟರ್‌ ಜಿಗಿದು ಆಳ್ವಾಸ್‌ ಸುಪ್ರಿಯಾ ಅವರ ಹೆಸರಿನಲ್ಲಿದ್ದ 1.79 ಮೀಟರ್‌ ದಾಖಲೆ ಮೀರಿದ್ದಾರೆ.

400 ಮೀಟರ್‌ ಹರ್ಡಲ್ಸ್‌: ನನ್ನಿ 1.02.3 ಸೆಕೆಂಡುಗಳಲ್ಲಿ ಗುರಿ ಮುಟ್ಟಿ, ಅನು (1.02.6 ಸೆ.)ಅವರ ಹಳೆಯ ಕೂಟ ದಾಖಲೆ ಮೀರಿದ್ದಾರೆ.

ಶಾಟ್‌ಪಟ್‌: ರೇಖಾ 14.02 ಮೀಟರ್‌ ದೂರ ಎಸೆದು ಆಳ್ವಾಸ್‌ನ ಅನಾಮಿಕಾ ದಾಸ್ ಅವರ (13.96 ಮೀಟರ್‌) ಹೆಸರಿನಲ್ಲಿದ್ದ ಹಳೆಯ ದಾಖಲೆಯನ್ನು ಮೀರಿದ್ದಾರೆ.

ಮಹಿಳೆಯರ 10,000 ಮೀಟರ್ ಓಟ: ಲಕ್ಷ್ಮೀ 35.54.9 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಆಳ್ವಾಸ್‌ನ ಶೀತಲ್ ಅವರ (36.57.8 ಸೆ) ದಾಖಲೆ
ಮೀರಿದ್ದಾರೆ.

ಮಹಿಳೆಯರ 200 ಮೀಟರ್‌ ಓಟ: ಲಿಖಿತಾ ಎಂ. 24.2 ಸೆಕೆಂಡುಗಳು ಗುರಿಮುಟ್ಟಿ ಆಳ್ವಾಸ್‌ ಪ್ರಿಯಾಂಕ ಕಳಗಿ ಎಸ್ (24.9 ಸೆ) ದಾಖಲೆಯನ್ನು ಮೀರಿದ್ದಾರೆ.

ಉದ್ದ ಜಿಗಿತ: ಶ್ರುತಿಲಕ್ಷ್ಮೀ 6.24 ಮೀಟರ್‌ ದೂರ ಜಿಗಿದು ಆಳ್ವಾಸ್‌ನ ಐಶ್ವರ್ಯ ಜಿ.ಎಂ (6.05 ಮೀ)ಅವರ ಹೆಸರಿನಲ್ಲಿದ್ದ ಹಳೆಯ ದಾಖಲೆಯನ್ನು ಮೀರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT