ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಟ್ವಾಳ: ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ಅಜಿತ್

ಅಕ್ಷರ ಗಾತ್ರ

ಬಾಲ್ಯದಿಂದಲೇ ಅನೇಕ ಸವಾಲುಗಳನ್ನು ಎದುರಿಸಿ, ಪ್ರಾಥಮಿಕ ಶಿಕ್ಷಣ ಪಡೆವ ವೇಳೆಯಲ್ಲಿ ಸಿಕ್ಕ ಪ್ರೋತ್ಸಾ
ಹದಿಂದ ವಾಲಿಬಾಲ್‍ನತ್ತ ಹೆಚ್ಚಿನ ಆಸಕ್ತಿ ಮೂಡಿ ನಂತರ ಕ್ರೀಡಾಕ್ಷೇತ್ರದಲ್ಲಿ ಹಂತ ಹಂತವಾಗಿ ಬೆಳೆದು ನಿಂತ ವಾಲಿಬಾಲ್‍ನ ಪ್ರತಿಭೆ ಅಜಿತ್. ಅವರು ಪ್ರಸ್ತುತ ಪಾಣೆಮಂಗಳೂರಿನಲ್ಲಿ ಶಾರದಾ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ.

ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರಿನ ಅಜಿತ್ ಅವರಿಗೆ ಚಿಕ್ಕ ವಯಸ್ಸಿನಿಂದಲೇ ಕ್ರೀಡೆಯಲ್ಲಿ ಅಪಾರ ಪ್ರೀತಿ. ಇದರಲ್ಲೇ ಆಸಕ್ತಿಯನ್ನು ಬೆಳೆಸಿಕೊಂಡರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ರಾಣಿಪುರ ಶಾಲೆಯಲ್ಲಿ ಪಡೆದರು. ಪ್ರೌಢ ಶಿಕ್ಷಣ ಬಿಜೈಯಲ್ಲಿ, ಪದವಿ ಪೂರ್ವ ಶಿಕ್ಷಣ ಶ್ರೀ ರಾಮಕೃಷ್ಣ ಕಾಲೇಜು, ಪದವಿ ಶಿಕ್ಷಣ ಸೇಂಟ್ ಅಲೋಶಿಯಸ್ ಸಂಜೆ ಕಾಲೇಜಿನಲ್ಲಿ ಪೂರೈಸಿದರು. ಜೋಸೆಫ್‌ ಕ್ರೀಡಾ ಗುರುಗಳಾಗಿ ಸ್ಫೂರ್ತಿ ತುಂಬಿದರು. ಶಿಕ್ಷಕರ ಪ್ರೋತ್ಸಾಹ ಅಜಿತ್ ಅವರನ್ನು ಇನ್ನಷ್ಟು ಬೆಳೆಯುವಂತೆ ಮಾಡಿತು.

ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅಜಿತ್‍ರವರು ಕೊ ಕೊ ಮತ್ತು ವಾಲಿಬಾಲ್‍ನಲ್ಲಿ ಜಿಲ್ಲಾ ಮಟ್ಟದ ಆಟಗಾರರಾಗಿ ಮಿಂಚಿದ್ದಾರೆ. ಹಲವು ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 1997 ರಲ್ಲಿ ಮೂಲ್ಕಿ
ಯಲ್ಲಿ ಜಿಲ್ಲಾ ಮಟ್ಟದ ಕೊ ಕೊ ಪಂದ್ಯಾಟದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಪದವಿ ಪೂರ್ವ ಶಿಕ್ಷಣದ ಸಮಯದಲ್ಲಿ ಸೇಂಟ್ ಅಲೋಶಿಯಸ್ ಸಂಜೆ ಕಾಲೇಜಿನಲ್ಲಿ ಕ್ರೀಡಾ ಕಾರ್ಯದರ್ಶಿಯಾಗಿದ್ದಾಗ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಅವರ ತಂಡವು ರನ್ನರಪ್ ಸ್ಥಾನ ಪಡೆದಿದೆ. ಅಜಿತ್ 2006 ರಲ್ಲಿ ವಾಲಿಬಾಲ್ ರಾಜ್ಯ ಮಟ್ಟದ ತೀರ್ಪುಗಾರ ಪರೀಕ್ಷೆಯಲ್ಲಿ ಮತ್ತು 2007 ರಲ್ಲಿ ನಡೆದ ಅಥ್ಲೆಟಿಕ್ ರಾಜ್ಯ ಮಟ್ಟದ ತೀರ್ಪುಗಾರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಹೀಗೆ ಸತತ ಪ್ರಯತ್ನದ ಫಲವಾಗಿ ಉತ್ತಮ ಕ್ರೀಡಾಪಟುವಾಗಿ ರೂಪುಗೊಂಡು, ಹದಿಮೂರು ವರ್ಷ ಕ್ರೀಡಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಾಮಾನ್ಯ ಮನೆತನದಿಂದ ಬಂದಿದ್ದು, ಕ್ರೀಡೆ ಜೀವನದಲ್ಲಿ ದೊಡ್ಡ ತಿರುವು ನೀಡಿದೆ. ತಾವು ಬೆಳೆದ ಊರು ವಾತಾವರಣ, ಕ್ರೀಡೆಗೆ ಪೂರಕವಾಗಿತ್ತು. ಇದು
ಇನ್ನಷ್ಟು ಕ್ರೀಡೆಗೆ ತನ್ನನ್ನು ತೊಡಗಿಸಿಕೊಳ್ಳುವಂತೆ ಮಾಡಿತು ಎನ್ನುತ್ತಾರೆ ಅಜಿತ್.

‘ಕ್ರೀಡಾಕ್ಷೇತ್ರದಲ್ಲಿಯೇ ಮುಂದುವರಿಯಬೇಕು ಎಂಬ ಆಸೆ, ಪ್ರಸ್ತುತ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯ
ನಿರ್ವಹಿಸುವ ಸಮಯದಲ್ಲಿ ನಾನು ಕಲಿಸಿದ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಟವಾಡಿದ್ದಾರೆ. ಅದರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ’ ಎನ್ನುತ್ತಾರೆ ಅವರು.

ಊರಿನ ಪ್ರೋತ್ಸಾಹ ಮತ್ತು ತನ್ನ ವಿದ್ಯಾರ್ಥಿ ಪಥವನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವಂತೆ ಮಾಡಬೇಕು ಎಂಬುದು ಕನಸು. ತಂದೆ ವಾಸು ಶೆಟ್ಟಿ, ತಾಯಿ ಉಮಾವತಿ, ಕ್ರೀಡಾಕ್ಷೇತ್ರದ ಸಾಧನೆಗೆ ಬೆನ್ನುಲುಬಾಗಿ ನಿಂತಿದ್ದಾರೆ. ಇವರು ಇನ್ನುಷ್ಟು ಬೆಳೆಯಲು ಸ್ಫೂರ್ತಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT