ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಸಾರಥ್ಯದಲ್ಲಿ ಮೂರನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವವು ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಮುಂಭಾಗ ದೇವರುಮಾರು ಗದ್ದೆಯಲ್ಲಿ ನಿರ್ಮಿಸಿದ್ದ ತ್ರಿನೇತ್ರ ವೇದಿಕೆಯಲ್ಲಿ ಸಹಸ್ತ್ರಾರು ಮಂದಿ ಭಕ್ತರ ಸಮ್ಮುಖದಲ್ಲಿ ಭಾನುವಾರ ಸಂಭ್ರಮದೊಂದಿಗೆ ನಡೆಯಿತು. ಮಹಾಲಿಂಗೇಶ್ವರ ದೇವರ ಒಪ್ಪಿಗೆ ಇದ್ದರೆ ಮುಂದಿನ ವರ್ಷ ಗಿರಿಜಾ ಕಲ್ಯಾಣ ನಡೆಸುವುದೆಂದು ಸಂಕಲ್ಪ ಮಾಡಲಾಯಿತು.

ಭಾನುವಾರ ಸಂಜೆ ಶ್ರೀನಿವಾಸ ದೇವರ ಕಲ್ಯಾಣೋತ್ಸವದ ಕುರಿತು ತಿರುಪತಿಯ ಅರ್ಚಕರು ಪ್ರವಚನ ನೀಡಿದರು. ಬಳಿಕ ಸಂಕಲ್ಪ ಪುಣ್ಯಾಹ, ದೇವನಾಂದಿ, ವರಪೂಜೆ, ವರೋಪಚಾರ ಸಹಿತ ಕಂಕಣಧಾರಣೆಯೊಂದಿಗೆ ವೈಕುಂಠಾಧಿಪತಿ ಶ್ರೀನಿವಾಸ ಮತ್ತು ಪದ್ಮಾವತಿಯ ಕಲ್ಯಾಣೋತ್ಸವ ಗೋಧೂಳಿ ಲಘ್ನದಲ್ಲಿ ನಡೆಯಿತು. ಇದೇ ವೇಳೆ ಆಕರ್ಷಕ ಸುಡುಮದ್ದು ಪ್ರದರ್ಶನವೂ ನಡೆಯಿತು. ಮಂಗಳಾರತಿ ಎತ್ತಿ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.

ತಿರುಪತಿ ಕ್ಷೇತ್ರ ಮೂಲದ ಲಕ್ಷ್ಮೀಪತಿ ಶರ್ಮ ಅವರ ನೇತೃತ್ವದಲ್ಲಿ ಮೋಹನ್ ಮತ್ತುರಾಮಚಂದ್ರ ಭಟ್ಟಾಚಾರ್ಯ ಅವರು ವೈದಿಕ ಕಾರ್ಯಕ್ರಮ ನೆರವೇರಿಸಿದರು. 12 ಮಂದಿ ಆಗಮಿಕರು ಕಲ್ಯಾಣೋತ್ಸವ ನಡೆಸಿಕೊಟ್ಟರು. ಶ್ರೀನಿವಾಸ ಕಲ್ಯಾಣೋತ್ಸವದ ಕೊನೆಯಲ್ಲಿ ಕುಂಟಾರು ರವೀಶ ತಂತ್ರಿ ಮಾತನಾಡಿ, ಧಾರ್ಮಿಕ ಕಾರ್ಯದಿಂದ ಹಿಂದೂ ಸಮಾಜಕ್ಕೆ ಶಕ್ತಿ ಸಿಗಲಿದೆ. ಹಿಂದೂ ಸಮಾಜ ಒಂದಾಗಬೇಕಿದ್ದು, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮೂಲಕ ಈ ಕಾರ್ಯ ಆಗುತ್ತಿದೆ. ಮಹಾಲಿಂಗೇಶ್ವರನ ಕ್ಷೇತ್ರದಲ್ಲಿ ಇದು ಉತ್ತಮ ಬೆಳವಣಿಗೆ ಎಂದರು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ವಕೀಲ ನರಸಿಂಹ ಪ್ರಸಾದ್, ಗೌರವಾಧ್ಯ ಬಲರಾಮ ಆಚಾರ್ಯ, ಸಿದ್ಧನಾಥ ಎಸ್.ಕೆ., ದಿವಾಕರ್ ದಾಸ್ ನೇರ್ಲಾಜೆ, ಗೌರವ ಸಲಹೆಗಾರ ಶಶಾಂಕ ಕೊಟೇಚಾ, ವೈದ್ಯ ಡಾ.ಸುರೇಶ್ ಪುತ್ತೂರಾಯ, ದಾಮೋದರ ಕುಲಾಲ್, ಚಂದಪ್ಪ ಮೂಲ್ಯ ಭಾಗವಹಿಸಿದ್ದರು.

ಮುಂದಿನ ವರ್ಷ ಗಿರಿಜಾ ಕಲ್ಯಾಣ: ಮಾಂಗಲ್ಯ ಧಾರಣೆಯ ಬಳಿಕ ಸಂಕೀರ್ತನೆ ನಡೆಸಿದ ಪುರೋಹಿತರು, ಮೂರು ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಪೂರ್ಣಗೊಂಡಿದೆ. ಮುಂದಿನ ವರ್ಷ ಶಿವನ ಕ್ಷೇತ್ರದಲ್ಲಿ ಗಿರಿಜಾ ಕಲ್ಯಾಣ ಮಾಡುವ ಸಂಕಲ್ಪ ಕೈಗೊಳ್ಳುವಂತೆ ಭಿನ್ನವಿಸಿಕೊಂಡರು. ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ಕುಮಾರ್ ಪುತ್ತಿಲ ಅವರು, ಈ ಕುರಿತು ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಕೇಳಿಕೊಳ್ಳಲಾಗುವುದು. ದೇವರ ಒಪ್ಪಿಗೆ ಇದ್ದರೆ ಗಿರಿಜಾ ಕಲ್ಯಾಣವೂ ಆಗಲಿದೆ ಎಂದರು.

ಗೋಹತ್ಯೆ ಮಾಡುವವರಿಗೆ ಕಠಿಣ ಶಿಕ್ಷೆಗೆ ಪ್ರಾರ್ಥನೆ: ಶ್ರೀನಿವಾಸನಿಗೆ ಗೋವು ಅತ್ಯಂತ ಪ್ರಿಯ. ಕಲ್ಯಾಣದ ಶ್ರೀನಿವಾಸನಿಗೆ ಗೋವು ದಾನವನ್ನು ತೆಂಗಿನಕಾಯಿ ರೂಪದಲ್ಲಿ ನೆರೆವೇರಿಸಲಾಗುತ್ತದೆ. ಶ್ರೀನಿವಾಸನು ತನಗೆ ದಾನ ಮಾಡಿದ ಗೋವನ್ನು ಭೂಲೋಕಕ್ಕೆ ನೀಡುತ್ತಾನೆ. ಈ ಗೋವುಗಳ ರಕ್ಷಣೆ ನಮ್ಮ ಕರ್ತವ್ಯ. ಗೋಹತ್ಯೆ ಮಾಡುವವರಿಗೆ ಅತ್ಯಂತ ಕಠಿಣ ಶಿಕ್ಷೆ ಆಗುವಂತೆ ಪ್ರಾರ್ಥನೆ ಮಾಡೋಣ ಎಂದು ಪುರೋಹಿತರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.