ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯ: ಶಿಕ್ಷಕ ಗುರುರಾಜ್ ವಿರುದ್ಧ ಪ್ರತಿಭಟನೆ 

Last Updated 11 ಆಗಸ್ಟ್ 2021, 13:40 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಶಿಕ್ಷಕ ಗುರುರಾಜ್ ವಿರುದ್ಧ ಬುಧವಾರ ಸುಬ್ರಹ್ಮಣ್ಯದ ಎಸ್.ಎಸ್ ಪಿ ಯು ಕಾಲೇಜು ಆವರಣದಲ್ಲಿ ಸಾರ್ವಜನಿಕ ಪ್ರತಿಭಟನೆ ನಡೆಯಿತು. ಹಿರಿಯ ವಿದ್ಯಾರ್ಥಿ ಸಂಘದವರು ನೇತೃತ್ವ ವಹಿಸಿದ್ದರು.

‘ಈ ಶಿಕ್ಷಕ ಈ ಸಂಸ್ಥೆಗೆ ಬರಬಾರದು. ನಮ್ಮ ಮೈದಾನಕ್ಕೆ ಬಂದರೆ ನಾವು ಸುಮ್ಮನಿರುವುದಿಲ್ಲ. ಆಡಳಿತ ಮಂಡಳಿ ಈಗಾಗಲೇ ಅಮಾನತು ಮಾಡಿದ್ದಾಗಿ ಗೊತ್ತಾಗಿದೆ. ಆದರೆ ಅವನು ಮತ್ತೆ ಆ ವೃತ್ತಿಯಲ್ಲಿ ಇಲ್ಲಿ ಇರಬಾರದು’ ಎಂದು ರಾಜೇಶ್ ಎನ್.ಎಸ್ ಹೇಳಿದರು.

‘ನ್ಯಾಯಾಂಗ ವ್ಯವಸ್ಥೆ ಬಗ್ಗೆ ಸಂಶಯ ವ್ಯಕ್ತಪಡಿಸುವ ಕಾಲ ಬಂದಿದೆ. ಮೂರೇ ದಿವಸದಲ್ಲಿ ಆರೋಪಿ ಹೊರ ಬಂದಿರುವ ವಿಚಾರ ದಿಗ್ಭ್ರಮೆ ಮೂಡಿಸಿದೆ’ ಎಂದು ಸುಧೀರ್ ಶೆಟ್ಟಿ ಮಾತನಾಡಿದರು.

ಅಶೋಕ್ ನೆಕ್ರಾಜೆ, ಪುಲಸ್ಯ ರೈ, ಕಿಶೋರ ಶಿರಾಡಿ, ಕೃಷ್ಣಮೂರ್ತಿ ಭಟ್, ಸುಬ್ರಹ್ಮಣ್ಯ ಕುಳ, ಹರೀಶ್ ಇಂಜಾಡಿ ಮಾತನಾಡಿದರು.

‘ಕಾಮುಕ ಶಿಕ್ಷಕ ಮತ್ತೆ ಸುಬ್ರಹ್ಮಣ್ಯಕ್ಕೆ ಕಾಲಿಡಬಾರದು. ಶಾಶ್ವತವಾಗಿ ಕೆಲಸದಿಂದ ತೆಗೆಯಬೇಕು’ ಎಂದು ಆಗ್ರಹಿಸಿದರು. ಪ್ರಶಾಂತ್ ಮಾಣಿಲ, ರಾಜೇಶ್ ಎನ್ ಎಸ್, ರವಿಕಕ್ಕೆಪದವು, ನೀಲಪ್ಪ, ರವೀಂದ್ರ ಕುಮಾರ್ ರುದ್ರಪಾದ, ಮೋಹನ್ದಾಸ್ ರೈ, ಕೃಷ್ಣ ಮೂರ್ತಿ, ಸುಧೀರ್ ಶೆಟ್ಟಿ, ಸತೀಶ್ ಕೂಜುಗೋಡು, ಗೊಪಾಲ ಎಣ್ಣೆಮಜಲು, ಎಚ್.ಎಲ್ ವೆಂಕಟೇಶ್, ಲಲಿತಾ ಗುಂಡಡ್ಕ, ಸವಿತಾ ಭಟ್, ದಿವ್ಯಾ, ಭಾರತಿ ಮೂಕಮಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT