ಬುಧವಾರ, ಮಾರ್ಚ್ 22, 2023
19 °C

ಮೊಗ್ರದಲ್ಲಿ ಕಾಲುಸಂಕ ‘ಗ್ರಾಮಸೇತು’ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಬ್ರಹ್ಮಣ್ಯ: ಸುಳ್ಯ ತಾಲ್ಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ನಿರ್ಮಾಣಗೊಂಡ ಕಾಲುಸಂಕ ‘ಗ್ರಾಮಸೇತು’ವನ್ನು ಗುರುವಾರ ಶಾಲಾ ವಿದ್ಯಾರ್ಥಿಗಳು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

‘ಗ್ರಾಮಸೇತು’ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಸಂಜೀವ ಕಬಕ, ‘ಜನರ ಸಂಕಷ್ಟಗಳನ್ನು ಜನರೇ ಕಾಲುಸಂಕ ನಿರ್ಮಾಣ ಮಾಡಿರುವುದು ಇಡೀ ದೇಶಕ್ಕೆ ಮಾದರಿ. ಆಶ್ವಾಸನೆಗಳನ್ನು ನಂಬಿ ಕೂರದೇ ಸದಾ ಕ್ರಿಯಾಶೀಲವಾಗಿರುವ ಸಮಾಜ ಸೃಷ್ಟಿಯಾಗಬೇಕಿದೆ. ಈ ಮೂಲಕ ಜನರನ್ನು ಬೆಸೆಯುವ ಕಾರ್ಯ ಮುಂದುವರಿಯಲಿ’ ಎಂದರು.

ಗುತ್ತಿಗಾರು ಚರ್ಚ್‌ ಧರ್ಮಗುರು ಆದರ್ಶ್‌ ಜೋಸೆಫ್, ‘ಎರಡೂ ಬದಿಯ ಜನರನ್ನು ಸಂಪರ್ಕ ಸಾಧಿಸಿದ ಸೇತುವೆ ಈಗ ಇಡೀ ಜನರನ್ನು ಮನಸ್ಸನ್ನೂ ಬೆಸೆದಿದೆ’ ಎಂದರು.

ಸಾಮಾಜಿಕ ಹೋರಾಟಗಾರ ದಿನೇಶ್ ಕೆ.ಭಟ್, ಮೊಗ್ರ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದ ಆಡಳಿತ ಮೊಕ್ತೇಸರ ಕಾರ್ಯಪ್ಪ ಗೌಡ ಚಿಕ್ಮುಳಿ, ಊರಿನ ಪ್ರಮುಖರಾದ ಗಂಗಾಧರ ಭಟ್ ಪುಚ್ಚಪ್ಪಾಡಿ, ಸ್ಥಳದಾನಿ ಸತ್ಯನಾರಾಯಣ ಭಟ್ ಮಾತೃಮಜಲು, ಗ್ರಾಮ ಪಂಚಾಯತಿ ಸದಸ್ಯರಾದದ ಎಂ.ಕೆ. ಶಾರದಾ ಮುತ್ಲಾಜೆ, ಲತಾಕುಮಾರಿ ಆಜಡ್ಕ, ವಸಂತ ಮೊಗ್ರ, ಭರತ್ ಕೆ.ವಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಅಶೋಕ್ ನೆಕ್ರಾಜೆ, ಶಿಕ್ಷಕ ಉದಯ, ನಿವೃತ್ತ ಶಿಕ್ಷಕ ಗುರವ ಮಾಸ್ತರ್, ಬಿ.ಸಿ. ಚೋಮ ಇದ್ದರು. ಕಾಲುಸಂಕಕ್ಕೆ ನಿರಂತರ ಶ್ರಮ ವಹಿಸಿದ ಯುವಕರನ್ನು ಗುರುತಿಸಲಾಯಿತು.

ಬಿಟ್ಟಿ ನೆಡುನೀಲಂ ಸ್ವಾಗತಿಸಿ, ಲಕ್ಷ್ಮೀಶ ಗಬ್ಲಡ್ಕ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ಮುತ್ಲಾಜೆ ವಂದಿಸಿದರು. ಪ್ರೀತಿಕುಮಾರಿ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು