ಶನಿವಾರ, ಜನವರಿ 16, 2021
27 °C

ಮಂಗಳೂರು: ನ್ಯಾಯಾಲಯ ಆವರಣದ ಗೋಡೆಯಲ್ಲಿ ಪ್ರಚೋದನಾಕಾರಿ ಬರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Mangalore pro terror wall writing

ಮಂಗಳೂರು: ನಗರದ ಮತ್ತೊಂದು ಕಡೆ ಪ್ರಚೋದನಾಕಾರಿ ಗೋಡೆ ಬರಹವು ಭಾನುವಾರ ಬೆಳಿಗ್ಗೆ ಕಾಣಿಸಿಕೊಂಡಿದೆ. 

ನಗರದ ಪಿವಿಎಸ್ ವೃತ್ತ ಸಮೀಪದ ನ್ಯಾಯಾಲಯದ ಆವರಣದ ಹಳೆ ಕಟ್ಟಡದ ಗೋಡೆಯಲ್ಲಿ ಈ ಬರಹ ಕಂಡುಬಂದಿದೆ.

ಗೋಡೆಯ ಮೇಲೆ ‘Gustak e rasool ek hi saza tan say juda’ ಎಂದು ಬರೆಯಲಾಗಿದೆ. ಬರಹದಲ್ಲಿರುವುದು ‘ಪ್ರವಾದಿಗೆ ಕೋಪ‌ ಬಂದರೆ ಒಂದೇ‌ ಶಿಕ್ಷೆ; ಅದು ದೇಹದಿಂದ ತಲೆ‌ ಬೇರ್ಪಡಿಸುವುದು’ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮಂಗಳೂರು: ಉಗ್ರ ಸಂಘಟನೆ ಲಷ್ಕರ್ ಪರ ಗೋಡೆ ಬರಹ

ಬಂದರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ‌ನೀಡಿ ಪರಿಶೀಲನೆ‌ ನಡೆಸುತ್ತಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಕದ್ರಿ ಸರ್ಕ್ಯೂಟ್ ಹೌಸ್ ರಸ್ತೆಯ ಅಪಾರ್ಟ್‌ಮೆಂಟ್ ಕಾಂಪೌಡ್ ಗೋಡೆಯೊಂದರಲ್ಲಿ  ಲಷ್ಕರ್ ಪರ ಗೋಡೆ ಬರಹ ಕಾಣಿಸಿಕೊಂಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು