ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳಕುಂಜೆ: ಮನೆಗೆ ನುಗ್ಗಿ ಕಳವು

Published 4 ಜುಲೈ 2024, 13:27 IST
Last Updated 4 ಜುಲೈ 2024, 13:27 IST
ಅಕ್ಷರ ಗಾತ್ರ

ಮೂಲ್ಕಿ: ಮನೆಯವರು ಒಳಗಿದ್ದಾಗಲೇ, ಮನೆಗೆ ನುಗ್ಗಿ ನಗ ನಗದು ಕಳವು ಮಾಡಿರುವ ಘಟನೆ ಮೂಲ್ಕಿ ಠಾಣಾ ವ್ಯಾಪ್ತಿಯ ಬಳಕುಂಜೆಯ ನೀರಳಿಕೆಯಲ್ಲಿ ಗುರುವಾರ ಗೊತ್ತಾಗಿದೆ.

ನೀರಳಿಕೆ ನಿವಾಸಿ ಶೇಖಬ್ಬ, ಪತ್ನಿ ಮತ್ತು ಮಕ್ಕಳು ರಾತ್ರಿ ಮಲಗಿದ್ದರು. ಶೇಖಬ್ಬ ಅವರ ಪುತ್ರಿಯ ಪತಿ ರಾತ್ರಿ 1 ಗಂಟೆಗೆ ಕರೆ ಮಾಡಿದ್ದು, ಕರೆ ಸ್ವೀಕರಿಸಿ ಮಲಗಿದ್ದರು. ಆ ಸಂದರ್ಭ ಕಳವಾಗಿರಲಿಲ್ಲ ಎಂದು ಮನೆಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ನಸುಕಿನ 4.30ಕ್ಕೆ ಶೇಕಬ್ಬ ಅವರ ಪುತ್ರಿ ಎದ್ದಾಗ ಕಳವಾಗಿರುವುದು ಗೊತ್ತಾಗಿದೆ.

ಹಾಸಿಗೆಯ ಅಡಿಯಲ್ಲಿದ್ದ ಕಪಾಟಿನ ಕೀಲಿಕೈ ತೆಗೆದು ಕಪಾಟಿನ ಬೀಗ ತೆರೆದು ಸುಮಾರು ₹ 2 ಲಕ್ಷ ಮೌಲ್ಯದ ಚಿನ್ನ, ಸುಮಾರು ₹ 5 ಸಾವಿರ ನಗದು ದೋಚಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳ, ಮೂಲ್ಕಿ ಪೋಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT