ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡು: ಒಂದೇ ಕುಟುಂಬದ ಮೂವರ ಶವ ಪತ್ತೆ

Published 17 ಫೆಬ್ರುವರಿ 2024, 13:48 IST
Last Updated 17 ಫೆಬ್ರುವರಿ 2024, 13:48 IST
ಅಕ್ಷರ ಗಾತ್ರ

ಕಾಸರಗೋಡು: ಕಾಞಂಗಾಡು ನಗರ ಬಳಿಯ ಆವಿಕ್ಕರ ಎಂಬಲ್ಲಿನ ಕ್ವಾರ್ಟರ್ಸ್ ಒಂದರಲ್ಲಿ ಶನಿವಾರ ಒಂದೇ ಕುಟುಂಬದ ಮೂವರ ಶವ ಪತ್ತೆಯಾಗಿದೆ.

ಸ್ಥಳೀಯ ನಿವಾಸಿ ಸೂರ್ಯಪ್ರಕಾಶ್ (56), ಅವರ ಪತ್ನಿ ಗೀತಾ (48), ಸೂರ್ಯಪ್ರಕಾಶರ ತಾಯಿ ಲೀಲಾ (90) ಎಂಬುವರ ಮೃತದೇಹ ಸಿಕ್ಕಿವೆ. ಮಹಿಳೆಯರಿಬ್ಬರ ಶವ ಮಲಗುವ ಕೋಣೆಯಲ್ಲಿ ಬಿದ್ದುಕೊಂಡಿರುವ, ಸೂರ್ಯಪ್ರಕಾಶ್ ಅವರ ಶವ ಅಡುಗೆಮನೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸೂರ್ಯಪ್ರಕಾಶ್ ಅವರು ಕಾಞಂಗಾಡು ನಗರದಲ್ಲಿ ವಾಚ್ ರಿಪೇರಿ ಅಂಗಡಿ ನಡೆಸುತ್ತಿದ್ದರು. ಲೀಲಾ ಅವರು ನಿವೃತ್ತ ಶಿಕ್ಷಕಿಯಾಗಿದ್ದರು. ಕೆಲಕಾಲಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಹೊಸದುರ್ಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT