ಕಾಸರಗೋಡು: ಸಿಸಿಟಿವಿ ಕ್ಯಾಮೆರಾ (ಎಐ ಕ್ಯಾಮೆರಾ)ದಲ್ಲಿ ಸೆರೆಯಾದ ಸಂಚಾರ ನಿಯಮ ಉಲಂಘನೆ ಪ್ರಕರಣಕ್ಕೆ ಸಂಬಂಧಿಸಿ 5 ವರ್ಷಗಳ ಅವಧಿಗೊಮ್ಮೆ ದಂಡ ಪಾವತಿಸುವಂತೆ ಕುಂಬಳೆಯ ವಾಹನ ಮಾಲೀಕರಿಗೆ ಸಾರಿಗೆ ಇಲಾಖೆ ನೋಟಿಸ್ ರವಾನಿಸುತ್ತಿದೆ.

ಭಾರಿ ಪ್ರಮಾಣದ ಮೊತ್ತವನ್ನು ದಂಡವಾಗಿ ಪಾವತಿಸಬೇಕು ಎಂದು ಹಲವರು ಆತಂಕಗೊಂಡಿದ್ದಾರೆ.

ಬಂದ್ಯೋಡು, ಕುಂಬಳೆ-ಬದಿಯಡ್ಕ ರಸ್ತೆಗಳಲ್ಲಿ ಅಳವಡಿಸಿರುವ ಎಐ ಕ್ಯಾಮೆರಾದಲ್ಲಿ ಸೆರೆಯಾಗಿರುವ, ನಿಯಮ ಉಲ್ಲಂಘಿಸಿದ ಹಲವರಿಗೆ ನೋಟಿಸ್ ತಲುಪಿದೆ. ಕಾರು ಸಹಿತ ವಾಹನಗಳಲ್ಲಿ ಸೀಟ್ ಬೆಲ್ಟ್ ಧರಿಸದೆ ಇರುವುದು, ದ್ವಿಕ್ರ ವಾಹನ ಸವಾರರು ಮತ್ತು ಸಹಸವಾರರು ಹೆಲ್ಮೆಟ್ ಧರಿಸದೆ ಇರುವ ಬಗ್ಗೆ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.

2021ರಿಂದ 2025ರವರೆಗಿನ ಅವಧಿಯಲ್ಲಿ ನಡೆದಿರುವ ನಿಯಮ ಉಲ್ಲಂಘನೆಗೆ ಸಂಬಂಧಿಸಿ ನೋಟಿಸ್ ನೀಡಲಾಗಿದೆ. ಬಂಬ್ರಾಣದ ಭಾರಿ ವಾಹನ ಚಾಲಕರೊಬ್ಬರಿಗೆ ಬಂಬ್ರಾಣ, ಕುಂಬಳೆ-ಬದಿಯಡ್ಕ ರಸ್ತೆಯ ಮತ್ತು ಬಂದ್ಯೋಡು ಅಡ್ಕ ಪ್ರದೇಶದ ಎಐ ಕ್ಯಾಮೆರಾದಲ್ಲಿ ಸೆರೆಯಾದ ಪ್ರಕರಣಗಳ ಸಂಬಂಧ ₹ 1 ಲಕ್ಷ ದಂಡ ಪಾವತಿಸುವಂತೆ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಮನೆಗಳಿಗೆ ಆಹಾರ ತಲುಪಿಸು ವ್ಯಕ್ತಿಯೊಬ್ಬರಿಗೆ ಇದೇ ರೀತಿ ₹ 1.5 ಲಕ್ಷ ದಂಡ ಪಾವತಿಸುವಂತೆ, ಕುಂಬಳೆಯ ಮೆಕ್ಯಾನಿಕ್ ಒಬ್ಬರಿಗೆ ₹ 50 ಸಾವಿರ ದಂಡ ವಿಧಿಸಲಾಗಿದೆ.

ಎಐ ಕ್ಯಾಮೆರಾದಲ್ಲಿ ಉಂಟಾಗಿದ್ದ ತಾಂತ್ರಿಕ ಸಮಸ್ಯೆ ಈ ವಿಳಂಬಕ್ಕೆ ಕಾರಣ. ದುರಸ್ತಿಯಾದ ನಂತರ ದೃಶ್ಯಗಳನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ವೇಳೆ ಈ ರೀತಿ ಆಗಿದೆ ಎಂದು ಕಾಸರಗಗೋಡಿನ ಸಾರಿಗೆ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

ಕಾನೂನನ್ನು ಗೌರವಿಸಿ, ದಂಡ ಪಾವತಿಸಲು ನಾವು ಸಿದ್ಧರಾದರೂ, ಈ ರೀತಿ ಏಕಾಏಕಿ ದಂಡ ಪಾತಿಸಬೇಕೆಂಬ ಕ್ರಮವನ್ನು ಸಡಿಲಗಳಿಸಬೇಕು ಎಂಬ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ. ಸ್ಪಂದಿಸದೆ ಇದ್ದರೆ ಹೋರಾಟ ನಡೆಸುವೆವು ಎಂದು ನೋಟಿಸ್ ಪಡೆದ ಕುಂಬಳೆಯ ವಾಹನ ಚಾಲಕರೊಬ್ಬರು ತಿಳಿಸಿದರು.

ಉಪ್ಪಳಗೇಟ್ ಬಳಿ ಅಪಘಾತ ಹೆಚ್ಚಳ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಉಪ್ಪಳಗೇಟ್ ಬಳಿ ವಾಹನ ಅಪಘಾತ ಹೆಚ್ಚಾಗುತ್ತಿದ್ದು, ಎರಡೂವರೆ ತಿಂಗಳಲ್ಲಿ ಮೂವರು ಮೃತಪಟ್ಟಿದ್ದಾರೆ.

ಪ್ರತಿ ದಿನ ಇಲ್ಲಿ ಅಪಘಾತಗಳು ನಡೆಯುತ್ತಿದ್ದು, ಸುಮಾರು 50 ಮಂದಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ನವೀಕರಣ ನಡೆಸುವ ವೇಳೆ ಅಪಘಾತ ನಿಯಂತ್ರಿಸುವ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.