ಪುತ್ತೂರು: ಭಾನುವಾರ ಮಧ್ಯಾಹ್ನ ಬೀಸಿದ ಗಾಳಿಯಿಂದಾಗಿ ಪುತ್ತೂರು ಗ್ರಾಮಾಂತರ ವ್ಯಾಪ್ತಿಯ ವಿವಿಧೆಡೆ ಮರಗಳು ಉರುಳಿ ವಿದ್ಯುತ್ ಪೂರೈಕೆ ಮತ್ತು ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು.

ಕಾವು-ಈಶ್ವರಮಂಗಲ-ಪಳ್ಳತ್ತೂರು ಅಂತರರಾಜ್ಯ ಸಂಪರ್ಕ ರಸ್ತೆಗೆ ವಿವಿಧೆಡೆ ಮರಗಳು ಉರುಳಿದ್ದವು.

ಈಶ್ವರಮಂಗಲ ಪೊಲೀಸ್ ಹೊರ ಠಾಣೆಯ ಸಮೀಪ ಈಶ್ವರಮಂಗಲ-ಪಳ್ಳತ್ತೂರು ರಸ್ತೆಯ ಬದಿಯಲ್ಲಿದ್ದ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿದೆ. ಅಲ್ಲಿದ್ದ ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ.

ಕಾವು-ಈಶ್ವರಮಂಗಲ ರಸ್ತೆಯ ನೂಜಿಬೈಲು ಎಂಬಲ್ಲಿ, ನೆಲ್ಲಿತ್ತಡ್ಕ ಬಳಿ, ಈಶ್ವರಮಂಗಲ-ಪಳ್ಳತ್ತೂರು ರಸ್ತೆಯ ಮೇನಾಲ ಸಮೀಪ ಮರ ಉರುಳಿದೆ. ಕೆಲವೆಡೆ ಅಡಿಕೆ ಮರಗಳು ಧಾರಾಶಾಹಿಯಾಗಿದ್ದು, ಹಲವಾರು ಮಂದಿ ಕೃಷಿಕರಿಗೆ ನಷ್ಟವುಂಟಾಗಿದೆ.

ರಸ್ತೆ ಸಂಚಾರಕ್ಕೆ ತೊಂದರೆ

ಸುಳ್ಯ: ಇಲ್ಲಿಂದ ಕೇರಳದ ಕಾಞಂಗಾಡ್ ಬಂದಡ್ಕ ಸಂಪರ್ಕದ ಅಂತರರಾಜ್ಯ ರಸ್ತೆಯಲ್ಲಿ ಕನ್ನಡಿತೋಡು ಎಂಬಲ್ಲಿ ರಸ್ತೆಗೆ ಭಾರಿ ಗಾತ್ರದ ಮತ ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಎರಡೂ ಭಾಗದಲ್ಲಿ ವಾಹನಗಳ ಸರತಿ ಸಾಲು ಉಂಟಾಗಿತ್ತು. ಮರದ ತೆರವು ಕಾರ್ಯಾಚರಣೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.