ಪುತ್ತೂರು: ಅರಣ್ಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಮರಗಿಡಗಳನ್ನು ನಾವು ಕಾಪಾಡಿಕೊಳ್ಳಬೇಕು. ವ್ಯಕ್ತಿಗೊಂದು ಮರ ಬೆಳೆಸುವ ಚಿಂತನೆ ಬೆಳೆಯಬೇಕು ಎಂದು ಶಾಸಕ ಅಶೋಕ್ ರೈ ಹೇಳಿದರು.

ಪುತ್ತೂರಿನ ಸರ್ಕಾರಿ ನೌಕರ ಸಂಘದ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘ ಮಂಗಳೂರು ವಿಭಾಗದದ ದಿನಚರಿ ಬಿಡುಗಡೆ, ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರು ವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ ಅಂಥೋನಿ ಎಸ್.ಮರಿಯಪ್ಪ ಮಾತನಾಡಿ, ಅಭಿವೃದ್ಧಿ ಪರವಾದ ಅರಣ್ಯ ರಕ್ಷಣೆಯ ಮುಂಚೂಣಿಯ ಸಂಘಟನೆಗಳಿಂದಾಗಿ ಮಂಗಳೂರು ವಿಭಾಗ ರಾಜ್ಯದಲ್ಲಿ ಉತ್ತಮ ಹೆಸರು ಗಳಿಸಿದೆ. ಅರಣ್ಯ ರಕ್ಷಣೆಗಾಗಿ ಮುಂದಿನ 4 ತಿಂಗಳು ಶ್ರಮ ಮತ್ತಷ್ಟು ಹೆಚ್ಚಾಗಬೇಕಾಗಿದೆ. ಬೆಂಕಿ ಅವಘಡಗಳಿಂದ ಅರಣ್ಯ ಪ್ರದೇಶವನ್ನು ರಕ್ಷಿಸಲು ಮುಂಜಾಗರೂಕತೆ ವಹಿಸಬೇಕು. ಅದಕ್ಕಾಗಿ ಕಚೇರಿಯ ಕೆಲಸಕ್ಕಿಂತಲೂ ಕ್ಷೇತ್ರ ಕಾರ್ಯಾಚರಣೆಗೆ ಒತ್ತು ಕೊಡಬೇಕು ಎಂದರು.

ಯೋಧರ ಹೆಸರಲ್ಲಿ ಗಿಡಗಳನ್ನು ನೆಡುತ್ತಿರುವ ಬೆಳ್ತಂಗಡಿಯ ಮುಂಡಾಜೆ ಸಚಿನ್ ಭಿಡೆ, ಉರಗ ರಕ್ಷಕರಾದ ರಾಮಣ್ಣ ಗೌಡ ಬಿಳಿನೆಲೆ, ತೇಜಸ್ ಪುತ್ತೂರು, ಶ್ರೀನಿವಾಸ್, ಮುಖ್ಯಮಂತ್ರಿಯ ಚಿನ್ನದ ಪದಕ ಪುರಸ್ಕಾರಕ್ಕೆ ಭಾಜನರಾದ ಗಸ್ತು ಅರಣ್ಯಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘದ ಅಧ್ಯಕ್ಷ ಜಿತೇಶ್ ಪಿ.ಅವರನ್ನು ಸನ್ಮಾನಿಸಲಾಯಿತು.

ಅರಣ್ಯ ಸಂರಕ್ಷಣಾಧಿಕಾರಿಗಳಾದ ಸುಬ್ಬಯ್ಯ, ಶಶಿಕಾಂತ್ ಎಸ್.ವಿಭೂತೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ, ವಲಯ ಅರಣ್ಯಾಧಿಕಾರಿಗಳಾದ ಬಿ.ಎಂ.ಕಿರಣ್, ಮಂಜುನಾಥ್, ರಾಜೇಶ್ ಬಳಿಗಾರ, ರಾಘವೇಂದ್ರ ಎಚ್.ಪಿ., ಸಂತೋಷ್ ಕುಮಾರ್ ರೈ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ, ಸಂಘದ ಗೌರವಾಧ್ಯಕ್ಷ ಜಗದೀಶ್ ಕೆ.ಎನ್. ಭಾಗವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಭುವನೇಶ್ ಸುಬ್ರಹ್ಮಣ್ಯ ಅವರು ಕಾರ್ಯಾಗಾರ ನಡೆಸಿಕೊಟ್ಟರು. ಸಂಘದ ಗೌರವಾಧ್ಯಕ್ಷ ಚಿದಾನಂದ್ ಬಿ. ಸ್ವಾಗತಿಸಿದರು. ಬಂಟ್ವಾಳ ವಲಯ ಅಧ್ಯಕ್ಷ ಅನಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಸ್ತು ಅರಣ್ಯ ಪಾಲಕ ರಸೂಲಸಾಬ ಸಕನಾದಗಿ ಮತ್ತು ಸವಿತಾ ಮುಂಡಾಜೆ ನಿರೂಪಿಸಿದರು.

ಮಾವಿನಮಿಡಿ ಕೊಯ್ಯಲು ಅವಕಾಶ ಇಲ್ಲ: ಈ ಬಾರಿ ಹೆಚ್ಚಿನ ಮಾವಿನ ಮರಗಳು ಹೂವು ಬಿಟ್ಟಿವೆ. ಬೇಕಾದಷ್ಟು ಮಾವಿನ ಹಣ್ಣು ಸಿಗಬಹುದು. ಇದರಿಂದ ನೂರಾರು ಪಕ್ಷಿಗಳಿಗೆ ಆಹಾರ ಸಿಗುವಂತಾಗುತ್ತದೆ. ಹಾಗಾಗಿ ಸರ್ಕಾರಿ ಜಾಗದಲ್ಲಿರುವ ಮಾವಿನ ಮರಗಳಿಂದ ಮಾವಿನಮಿಡಿಗಳನ್ನು ಕೊಯ್ಯಲು ಅವಕಾಶ ಇಲ್ಲ. ಈ ಹಿಂದೆ ಸರ್ಕಾರಿ ಜಾಗದಲ್ಲಿರುವ ಮಾವಿನಮರಗಳಿಂದ ಮಾವಿನಮಿಡಿ ಕೊಯ್ಯಲು ಏಲಂ ನಡೆಸಲಾಗುತ್ತಿತ್ತು. ಆದರೆ, ಕಳೆದ ವರ್ಷದಿಂದ ಇದನ್ನು ತಡೆಹಿಡಿಯಲಾಗಿದೆ. ಪರಿಸರದಲ್ಲಿ ಲಭಿಸುವ ಹಣ್ಣಿನಿಂದ ಪರಿಸರದ ಪ್ರಾಣಿ–ಪಕ್ಷಿಗಳು ಬದುಕುವಂತಾಗಬೇಕು ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಶೋಕ್ ರೈ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.