ಮಂಗಳವಾರ, ನವೆಂಬರ್ 24, 2020
19 °C

ತುಳು ಸಿನಿಮಾ ನಟ ಸುರೇಂದ್ರ ಬಂಟ್ವಾಳ ಕೊಲೆ ಪ್ರಕರಣ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Surendra Bantwal

ಮಂಗಳೂರು: ರೌಡಿಶೀಟರ್, ಚಿತ್ರನಟ ಸುರೇಂದ್ರ ಬಂಟ್ವಾಳ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ಸತೀಶ ಕುಲಾಲ್ ಹಾಗೂ ಕಿನ್ನಿಗೋಳಿಯ ಗಿರೀಶ್ ಬಂಧಿತ ಆರೋಪಿಗಳು. ಇಬ್ಬರೂ ಕೇರಳದಿಂದ ಬಂಟ್ವಾಳಕ್ಕೆ ಬರುತ್ತಿರುವ ಮಾಹಿತಿ ಪಡೆದ ಪೊಲೀಸರು, ಇಬ್ಬರನ್ನು ಮುಡಿಪು ಬಳಿ ಬಂಧಿಸಿದ್ದಾರೆ.

ಮೂರು ದಿನಗಳ ಹಿಂದೆ ಬಂಟ್ವಾಳದ ಅಪಾರ್ಟಮೆಂಟ್‌ನಲ್ಲಿ ಸುರೇಂದ್ರ ಬಂಟ್ವಾಳ ಕೊಲೆಯಾಗಿತ್ತು. ನಂತರ ಸುರೇಂದ್ರ ಬಂಟ್ವಾಳನ ಆಪ್ತ ಎನ್ನಲಾದ ಸತೀಶ್ ಎಂಬಾತ ಅಡಿಯೊ ಕಳುಹಿಸಿದ್ದು, ಸುರೇಂದ್ರ ಬಂಟ್ವಾಳ ಕೊಲೆ ಮಾಡಿರುವುದು ನಾನೇ. ಇದು ಉಡುಪಿಯ ಕಿಶನ್ ಹೆಗ್ಡೆ ಕೊಲೆಗೆ ಪ್ರತೀಕಾರ ಎಂದು ತಿಳಿಸಿದ್ದ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು