ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯೋಗಾಭ್ಯಾಸ ಜೀವನಶೈಲಿಯಾಗಲಿ’

Last Updated 7 ಫೆಬ್ರುವರಿ 2023, 4:41 IST
ಅಕ್ಷರ ಗಾತ್ರ

ಉಜಿರೆ: ಹಿತ ಮಿತ ಆಹಾರ ಸೇವನೆ ಯೊಂದಿಗೆ ಯೋಗಾಭ್ಯಾಸ ದೈನಂದಿನ ಜೀವನ ಶೈಲಿಯಾದಾಗ ಆರೋಗ್ಯ ರಕ್ಷಣೆ ಸಾಧ್ಯ ಎಂದು ವಿಯೆನ್ನಾದ ಶ್ರೀ ದೀಪ್ ಮಾಧವಾನಂದ ಆಶ್ರಮದ ವಿಶ್ವಗುರು ಮಹಾಮಂಡಲೇಶ್ವರ ಪರಮಹಂಸ ಸ್ವಾಮಿ ಮಹೇಶ್ವರಾನಂದಜಿ ಹೇಳಿದರು.

ಉಜಿರೆಯ ಎಸ್‌ಡಿಎಂ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಶಿಷ್ಯೋಪನಯನ ಸಮಾರಂಭದಲ್ಲಿ ಅವರು ಆಶೀವರ್ಚನ ನೀಡಿದರು.

ವಿಶ್ವದ ಸಕಲ ಜೀವರಾಶಿಗಳಲ್ಲಿ ಮನುಷ್ಯಜನ್ಮ ಶ್ರೇಷ್ಠ. ಮದ್ಯ, ಮಾಂಸ ತ್ಯಾಗ ಮಾಡಿ, ತಾಯಿ ಮತ್ತು ಭೂಮಿತಾಯಿಗೆ ವಿಶೇಷ ಗೌರವ ನೀಡಬೇಕು ಎಂದು ಸಲಹೆ ನೀಡಿದರು. ನಿತ್ಯವೂ ಯೋಗಾಭ್ಯಾಸದಿಂದ ನಾವು ಪರಿಪೂರ್ಣ ಮನುಷ್ಯರಾಗಿ ಆರೋಗ್ಯ ಪೂರ್ಣ ಜೀವನ ನಡೆಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಕ್ರೊನೇಶಿಯಾದ ಅಗ್ನಿದೇವಿ ಮತ್ತು ಸ್ವಾಮಿ ಅವತಾರ ಗುರೂಜಿ ಶುಭ ಕೋರಿ ದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್.ಸತೀಶ್ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಡಾ. ಗೀತಾ ಶೆಟ್ಟಿ ಧನ್ಯವಾದ ಹೇಳಿದರು. ಡಾ. ಜೋಸ್ನಾ ಮತ್ತು ಡಾ. ಅನಿಕಾ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT