ಉಳ್ಳಾಲ: ಪ್ರಕೃತಿಯಿಂದಲೇ ರೂಪುಗೊಂಡ ದೇಹ-ಭಾವವನ್ನು ಬಳಸಿಕೊಂಡು ಬದುಕುವಾಗ ಪ್ರಕೃತಿಯನ್ನು ಮರೆಯಬಾರದು. ಬದುಕಿಗಾಗಿ ವ್ಯವಹಾರ ಬೇಕು. ಆದರೆ ಬದುಕೇ ವ್ಯವಹಾರವಾಗಬಾರದು ಎಂದು ಕೆನರಾ ಪಿಯು ಕಾಲೇಜಿನ ಉಪನ್ಯಾಸಕ ರಘ ಇಡ್ಕಿದು ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ 'ಬಿತ್ತಿ' ಗೋಡೆ ಬರಹ ಪತ್ರಿಕೆ ಆಯೋಜಿಸಿದ್ದ ಸೃಜನ-ಚಿಂತನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಬದುಕನ್ನು ಬಿಟ್ಟು ಸಾಹಿತ್ಯವಿಲ್ಲ, ಸಾಹಿತ್ಯದ ಓದು ಬದುಕನ್ನು ಸಂಭ್ರಮಿಸಲು ಕಲಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಸೋಮಣ್ಣ ಮಾತನಾಡಿ ಕವಿತೆಯ ಸಾಲುಗಳಲ್ಲಿ ಹೊಸತನ್ನು ಕಾಣಿಸುವ ಕಣ್ಣಿರಬೇಕು ಎಂದರು. ವಿಭಾಗದ ಪ್ರಾಧ್ಯಾಪಕರಾದ ನಾಗಪ್ಪ ಗೌಡ, ಧನಂಜಯ ಕುಂಬ್ಳೆ, ಯಶುಕುಮಾರ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಜಬೀನಾ, ರಾಕೇಶ್, ಸೌಮ್ಯಾ ಟಿ.ಎಸ್, ಪ್ರತೀಕ್ಷಾ, ಸಲೀಂ, ಶ್ರೇಯಸ್ ಮೊದಲಾದವರು ಕವನ ವಾಚನ ಮಾಡಿದರು. ‘ಭಿತ್ತಿ’ ಸಂಪಾದಕಿ ಸಂಧ್ಯಾ ಎನ್ ಮಣಿನಾಲ್ಕೂರು ಸ್ವಾಗತಿಸಿದರು. ದುಶ್ಯಂತ್ ಪ್ರಥಮ ಎಂ.ಎ ವಂದಿಸಿದರು. ರೇಷ್ಮಾ ಎನ್ ಬಾರಿಗ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.